i
ಗ್ರಾ.ಪಂ ಉಪಚುನಾವಣೆ, ನಿಷೇಧಾಜ್ಞೆ ಜಾರಿ, ನೌಕರರಿಗೆ ವೇತನ ಸಹಿತ ರಜೆ ಘೋಷಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿಯಾಗಿದ್ದ 05 ಗ್ರಾಮ ಪಂಚಾಯತಿ ಸ್ಥಾನಗಳ ಪೈಕಿ ಚಿತ್ರದುರ್ಗ ತಾಲೂಕು ಕಾಲ್ಗೆರೆ ಹಾಗೂ ಹೊಳಲ್ಕೆರೆ ತಾಲೂಕಿನ ಹಿರೇಮ್ಮಿಗನೂರು ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಉಳಿದ ಚಿತ್ರದುರ್ಗ ತಾಲ್ಲೂಕಿನ ಯಳಗೋಡು, ಜಂಪಣ್ಣನಾಯಕನಕೋಟೆ ಹಾಗೂ ಚಳ್ಳಕೆರೆ ತಾಲ್ಲೂಕು ನೇಲಗೆತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಆಯ್ಕೆಗೆ ಫೆ.25 ರಂದು ಮತದಾನ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿAದ ಸಂಜೆ 5 ಗಂಟೆವರೆಗೆ ಮತದಾನವು ನಡೆಯಲಿದ್ದು, ಮತದಾನ ಪಾವಿತ್ರö್ಯತೆ ಕಾಪಡುವ ದೃಷ್ಟಿಯಿಂದ ಫೆ.25 ರಂದು ಬೆಳಿಗ್ಗೆ 6 ಗಂಟೆಯಿAದ ಸಂಜೆ 6 ಗಂಟೆವರೆಗೆ ಮತದಾನ ನಡೆಯುವ ಮತಗಟ್ಟೆ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶದಲ್ಲಿ ಸಿ.ಆರ್.ಪಿ.ಸಿ 1973 ರ ಕಲಂ 144 ರ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಿರುತ್ತಾರೆ. ಮತದಾನ ಕೊನೆಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಬಹುದು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ವೇತನ ಸಹಿತ ರಜೆ : ಉಪ ಚುನಾವಣೆ ನಡೆಯುವ ಮತ ಕ್ಷೇತ್ರಗಳ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟಿçÃಕೃತ ಬ್ಯಾಂಕುಗಳು, ಸರ್ಕಾರಿ ಹಾಗೂ ಸಹಕಾರ ರಂಗದ ಕಾರ್ಖಾನೆ ಹಾಗೂ ಕೈಗಾರಿಕೆ ಸಂಸ್ಥೆಗಳಲ್ಲಿ ಖಾಯಂ ಹಾಗೂ ದಿನಗೂಲಿ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ.