i
ಮೊರಾರ್ಜಿ ವಸತಿ ಶಾಲೆಗಾಗಿ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2023 ನೇ ಸಾಲಿನ ಮೊರಾರ್ಜಿ ಹಾಗೂ 5 ನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಮ್ಮಿಕ್ಕೊಳ್ಳಲಾಗಿದ್ದು ಶಿಕ್ಷಕಿ ಹೇಮಲತ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ತರಗತಿ ನಡೆಸಿಕೊಟ್ಟರು. ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಸಂಸ್ಥೆ ಹಿರಿಯೂರು ರವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಜಾಗೃತಿ ಮೂಡಿಸಲು ತಮ್ಮ ಅಳಿಲು ಸೇವೆ ಸಲ್ಲಿಸುವ ಪ್ರವೃತ್ತಿ ಹೊಂದಿರುವ ಶಿಕ್ಷಕಿ ಹೇಮಲತರವರು ಮುಂದಿನ ದಿನಾಂಕ-05/ 03/ 23 ಮತ್ತು 11 / 03/ 23ರಂದು 2 ದಿನಗಳ ಕಾಲ ಬೆಳಗ್ಗೆ 10 ರಿಂದ 4 ರ ವರೆಗೆ ಮೊರಾರ್ಜಿ ಶಾಲಾ ಪ್ರವೇಶಕ್ಕೆ ಪರೀಕ್ಷೆ ಬರೆಯುವಂತ ವಿದ್ಯಾರ್ಥಿಗಳಿಗೆ ಅಗತ್ಯವಾದ ತರಗತಿ ನಡೆಸಿ ಕೊಡಲಿದ್ದಾರೆ.
ಆಸಕ್ತ ಎಲ್ಲಾ ವಿದ್ಯಾಥಿ೯ಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಜಿಲ್ಲೆಗೆ 15ನೇ ರ್ಯಾಂಕ್ ಪಡೆದು ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಜ್ಜಾಗಿರುವ ಹೇಮಲತ ಇವರ ಸೇವೆಯನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕಿ ಹೇಮಲತ ಅವರು ಬಡಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಾ, ಜಿಲ್ಲೆಯಾದ್ಯಂತ ನೂರಾರು ವಿದ್ಯಾರ್ಥಿಗಳು ಇವರ ಕಾರ್ಯಕ್ರಮಗಳ ಉಪಯೋಗ ಪಡೆದುಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ತರಬೇತಿ ಪಡೆದುಕೊಳ್ಳುವವರು 9686194485 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಲು ಶಿಕ್ಷಕಿ ಹೇಮಲತ ಮನವಿ ಮಾಡಿದ್ದಾರೆ.