i
ಬಿಎಸ್ಸಿ ವಿದ್ಯಾರ್ಥಿನಿ ಅಭಿನಯ ಕಾರ್ಯ ಶ್ಲಾಘನೀಯ-ಎಸ್ಪಿ ಪರಶುರಾಮ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಣ, ಪೋನ್, ಚೈನ್, ಕದಿಯುವಂತ ಕಾಲದಲ್ಲಿ ಬೀದಿಯಲ್ಲಿ ಬಿದ್ದಿದ್ದ ಐ-ಪೋನ್ ನನ್ನು ಪೊಲೀಸರ ಸಹಕಾರದಿಂದ ಐ ಪೋನ್ ಮಾಲೀಕರಿಗೆ ಒಪ್ಪಿಸುವ ಮೂಲಕ ವಿದ್ಯಾರ್ಥಿನಿ ಅಭಿನಯ ಅವರು ಅತ್ಯಂತ ಪ್ರಮಾಣಿಕ ತನ ಮೆರೆದಿದ್ದಾರೆ.
ಎಂದಿನಂತೆ ವಿದ್ಯಾರ್ಥಿನಿ ಆರ್.ಎಂ.ಅಭಿನಯ ಅವರು ದಿನ ಪತ್ರಿಕೆಗಳನ್ನು ಮನೆ ಮನೆಗೆ ಹಾಕುವ ಕಾಯಕ ಮಾಡುತ್ತಿದ್ದು ಫೆ.27 ರಂದು ಬೆಳಿಗ್ಗೆ ಚಿತ್ರದುರ್ಗ ನಗರದ ಮರ್ಚೆಂಟ್ ಬ್ಯಾಂಕ್ ರಸ್ತೆಯ ಮನೆಗಳಿಗೆ ಪೇಪರ್ ಹಾಕುವ ಕಾರ್ಯ ಮಾಡುವ ಸಂದರ್ಭದಲ್ಲಿ ಐ-ಫೋನ್ ಸಿಕ್ಕಿದೆ. ಪತ್ರಿಕೆಗಳನ್ನು ಮನೆ ಮನೆಗಳಿಗೆ ಹಾಕುವ ಕಾರ್ಯ ಮುಗಿದ ಕೂಡಲೇ ಬೀದಿಯಲ್ಲಿ ಸಿಕ್ಕಿದ್ದ ಐ-ಫೋನ್ನ್ನು ಜಿಲ್ಲಾ ಪೊಲೀಸ್ ವರಿಷ್ಠ ಆಧೀಕ್ಷಕ ಪರಶುರಾಮ್ ಅವರಿಗೆ ಒಪ್ಪಿಸಿ ವಿದ್ಯಾರ್ಥಿನಿ ಅಭಿನಯ ಪ್ರಮಾಣಿಕತೆ ಮೆರೆದಿದ್ದಾರೆ.
ವಿದ್ಯಾರ್ಥಿನಿ ಎಂ.ಬಿ.ಅಭಿನಯ ಅವರು ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ನಿವಾಸಿಯಾಗಿದ್ದು ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ವಿದ್ಯಾರ್ಥಿನಿ ಅಭಿಯನ.ಆರ್.ಎಂ ನೀಡಿದ ಐ-ಪೋನ್ ನನ್ನು ಮಾಲೀಕರಿಗೆ ತಲುಪಿಸುವ ಮೂಲಕ ವಿದ್ಯಾರ್ಥಿನಿ ಪ್ರಮಾಣಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಐ-ಫೋನ್ ಮಾಲೀಕ ಬಾಬುಲಾಲ್ ರವರಿಗೆ ಎಸ್ಪಿ ಅವರ ಸಮ್ಮುಖದಲ್ಲಿ ವಿದ್ಯಾರ್ಥಿನಿ ಅಭಿನಯ ಇವರಿಂದ ವಾಪಸ್ ಕೊಡಿಸಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ ಪರರ ವಸ್ತುವಿಗೆ ಆಸೆ ವಿದ್ಯಾರ್ಥಿನಿ ಅಭಿನಯ ಅವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.