i
ಜೋಗಿಮಟ್ಟಿ ರಸ್ತೆಯ ಸಲ್ಮಾಬಾನು ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ 3ನೇ ಕ್ರಾಸ್ ನಿವಾಸಿ ಸಲ್ಮಾಬಾನು (32) ಗಂಡ ಫಯಾಜುಲ್ಲಾ ಎಂಬ ಮಹಿಳೆ 2023ರ ಫೆಬ್ರವರಿ 10 ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ಮಹಿಳೆ ಚಹರೆ ಇಂತಿದೆ. ಸಲ್ಮಾಬಾನು ಗಂಡ ಫಯಾಜುಲ್ಲಾ, 32 ವರ್ಷ, ಮುಸ್ಲಿಂ ಜನಾಂಗಕ್ಕೆ ಸೇರಿದ್ದು, ಕ್ಯಾಂಟಿನ್ ಕೆಲಸ ಮಾಡುತ್ತಾರೆ. ಸುಮಾರು ಎತ್ತರ 5 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ತೆಳುವಾದ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದ ಕೂದಲು ಇರುತ್ತದೆ. ಕನ್ನಡ, ಹಿಂದಿ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆ ವಿವರವುಳ್ಳ ಮಹಿಳೆ ಕುರಿತು ಮಾಹಿತಿ ದೊರೆತ ಕೂಡಲೇ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ.