i
ಮೊರಾರ್ಜಿ ಹಾಗೂ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ತರಬೇತಿ ಶಿಬಿರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2023 ನೇ ಸಾಲಿನ ಮೊರಾರ್ಜಿ ಹಾಗೂ 5 ನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಮ್ಮಿಕ್ಕೊಳ್ಳಲಾಗಿದ್ದು ಶಿಕ್ಷಕಿ ಹೇಮಲತರವರು ವಿದ್ಯಾರ್ಥಿಗಳಿಗೆ ಶನಿವಾರ 11/03/2023 ರಂದು 10 ರಿಂದ 4 ಗಂಟೆಯವರೆಗೆ ಮಾರ್ಗದರ್ಶನ ತರಗತಿಯನ್ನು ಹಿರಿಯೂರಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನೀಡುವರು.
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಜಾಗೃತಿ ಮೂಡಿಸುವ ಮತ್ತು ಪರೀಕ್ಷೆಯನ್ನು ಎದುರಿಸಲು ಈ ತರಬೇತಿಯಿಂದ ಪ್ರಯೋಜನವಾಗಲಿದೆ. 12 /3/23 ರಂದು ಮೊರಾರ್ಜಿ ಪ್ರವೇಶ ಪರೀಕ್ಷೆ ನಡೆಯಲಿದ್ದು , 11/03/2023 ರಂದು ತರಗತಿಗೆ ಹಾಜರಾಗಲು ವಿನಂತಿಸಲಾಗಿದೆ. (ಭೋದನಾ ಶುಲ್ಕ 100 ರೂ ನಿಗದಿ ಪಡಿಸಲಾಗಿದೆ.) ದಿನಾಂಕ 6/3/23 ರಿಂದ 11/3/23 ರ ವರೆಗೆ ವಿಶೇಷ ತರಗತಿಗಳು ಸಹ ತರಬೇತಿ ಕೇಂದ್ರದಿಂದ ನಡೆಯುತ್ತಿದೆ. ಆಸಕ್ತರು ಈ ಪ್ರಯೋಜನ ಪಡೆಯಲು 9686194485 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.