i
ನೇತ್ರ ಪರೀಕ್ಷಕಿ ಹೆಚ್.ಜಿ.ಲತಾ ಪ್ರಕಾಶ್ ಅಕಾಲಿಕ ಸಾವಿಗೆ ತುತ್ತು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಗಾಂಧಿ ಬಡಾವಣೆ ನಿವಾಸಿ, ಹುಳಿಯಾರು ರಸ್ತೆಯಲ್ಲಿರುವ ವಾಸವಿ ರಕ್ತ ಪರೀಕ್ಷೆ ಲ್ಯಾಬ್ ಮಾಲೀಕರಾದ ಪತಿ ಪ್ರಕಾಶ್ ಅವರ ಪತ್ನಿ ಹಾಗೂ ನೇತ್ರ ಪರೀಕ್ಷಕಿ ಹೆಚ್.ಜಿ.ಲತಾ ಪ್ರಕಾಶ್(36) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಧರ್ಮಪುರ ಸಮುದಾಯ ಆಸ್ಪತ್ರೆಯಲ್ಲಿ ನೇತ್ರ ಪರೀಕ್ಷಕಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ಪ್ರಕಾಶ್ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಸ್ವಗ್ರಾಮ ಹಿರಿಯೂರು ತಾಲೂಕಿನ ಈಶ್ವರಗೆರೆ ಗ್ರಾಮದಲ್ಲಿ ಮಂಗಳವಾರ ಸಂಜೆ ಅಂತ್ಯ ಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.