i
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಸರ್ಕಾರ….
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ 20 ಹುದ್ದೆಗಳಿಗೆ ಮಾರ್ಚ್ 28 ರಿಂದ ಆಪ್ಲೈಂನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 26 ಕೊನೆಯ ದಿನವಾಗಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲಭವನ ಆವರಣ, ಜಿಲ್ಲಾ ಒನಕೆ ಓಬವ್ವ ಕ್ರೀಡಾಂಗಣ (ಸ್ಟೇಡಿಯಂ) ಹತ್ತಿರ, ಚಿತ್ರದುರ್ಗ ಇಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಖಾಲಿ ಇರುವ ಕೇಂದ್ರಗಳ ಪಟ್ಟಿ ಹಾಗೂ ಮೀಸಲಾತಿ ವಿವರ ಇಂತಿದೆ. ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆನ್ನೆಡ್ಲು (ಪರಿಶಿಷ್ಟ ಪಂಗಡ), ಎಂ.ಕೆ.ಹಟ್ಟಿ ಗ್ರಾಮ ಪಂಚಾಯಿತಿಯ ಎಂ.ಕೆ.ಹಟ್ಟಿ-ಎ (ಇತರೆ), ಜಿ.ಆರ್.ಹಳ್ಳಿ ಗ್ರಾಮ ಪಂಚಾಯಿತಿಯ ತಮಟಕಲ್ಲು-ಬಿ (ಪರಿಶಿಷ್ಟ ಜಾತಿ), ಹಳೇದ್ಯಾಮವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಸವರಹಟ್ಟಿ (ಇತರೆ), ಹೊಸಕಲ್ಲಹಳ್ಳಿ (ಇತರೆ), ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ.ಸಿ.ಹಳ್ಳಿ ಗೊಲ್ಲರಹಟ್ಟಿ (ಪರಿಶಿಷ್ಟ ಪಂಗಡ), ಡಿ.ಎಸ್.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ಕೆ.ಹಟ್ಟಿ-ಬಿ(ಪರಿಶಿಷ್ಟ ಜಾತಿ), ಚೇಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಪ್ಪನಹಟ್ಟಿ ಎಸ್.ಸಿ ಕಾಲೋನಿ(ಇತರೆ), ಮಾಳಪ್ಪನಹಟ್ಟಿ (ಇತರೆ), ಶಾಂತಿನಗರ (ಇತರೆ), ಚಿತ್ರದುರ್ಗ ನಗರಸಭೆ ವಾರ್ಡ್ನಂಟ 30 ಬೇಡರಕಣ್ಣಪ್ಪ ದೇವಸ್ಥಾನ ಹತ್ತಿರ (ಪರಿಶಿಷ್ಟ ಜಾತಿ), ವಾರ್ಡ್ನಂಟ 6 ರಾಘವೇಂದ್ರ ಮಠ (ಇತರೆ), ವಾರ್ಡ್ನಂ 34 ಸಿ.ಟಿ.ಕೆ.ಲೇಔಟ್ (ಇತರೆ), ವಾರ್ಡ್ನಂರ 26 ಬಸವೇಶ್ವರ ಟಾಕೀಸ್ (ಇತರೆ), ವಾರ್ಡ್ ನಂ 29 ಬ್ಯಾಂಕ್ ಕಾಲೋನಿ (ಇತರೆ), ವಾರ್ಡ್ನಂಇ 22 ಜೆ.ಸಿ.ಆರ್.ಬಡಾವಣೆ (ಇತರೆ), ವಾರ್ಡ್ ನಂ 9 ದವಳಗಿರಿ ಬಡಾವಣೆ (ಇತರೆ), ಮೇದೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ (ಇತರೆ), ಈಶ್ವರ ಬಡಾವಣೆ (ಇತರೆ) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲಭವನ ಆವರಣ, ಜಿಲ್ಲಾ ಒನಕೆ ಓಬವ್ವ ಕ್ರೀಡಾಂಗಣ (ಸ್ಟೇಡಿಯಂ) ಹತ್ತಿರ, ಚಿತ್ರದುರ್ಗ-577501 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.