i
ಕುಮಾರಸ್ವಾಮಿಗೆ ಸಾಲ ನೀಡಿದ ಭವಾನಿ ರೇವಣ್ಣ….
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಚಿವ ರೇವಣ್ಣನವರ ಪತ್ನಿ ಹಾಸನ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ 3,26,565 ರೂ.ಗಳನ್ನು ಸಾಲ ನೀಡಿದ್ದಾರೆ.
ಹಾಗೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ. ಕುಮಾರಸ್ವಾಮಿಯವರಿಗೆ ಮಾತ್ರವಲ್ಲದೆ, ಮಗ ಪ್ರಜ್ವಲ್ ರೇವಣ್ಣ ಅವರಿಗೆ 50 ಲಕ್ಷ ರೂ.ಗಳನ್ನು ನೀಡಿದ್ದು ಭವಾನಿ ರೇವಣ್ಣ ಪತಿಗಿಂತ ಒಂದು ಕೋಟಿ ಹೆಚ್ಚಿನ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಬಳಿ 8.66 ಕೋಟಿ ಮೌಲ್ಯದ ಚರಾಸ್ತಿ ಇದೆ. ಅಲ್ಲದೆ, 29.58 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಭವಾನಿ ಅವರ ಬಳಿಯಿದೆ. ಕೇವಲ ಭವಾನಿ ರೇವಣ್ಣ ಸಾಲ ನೀಡುವುದಷ್ಟೇ ಅಲ್ಲ ಅವರು ಕೂಡಾ 5.28 ಕೋಟಿ ರೂ. ಸಾಲ ಮಾಡಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.