i
ತುಮಕೂರು ಜೆಡಿಎಸ್ ಘಟಕಕ್ಕೆ ಸುಮಾ ಮತ್ತು ಲಕ್ಷ್ಮಿಕಾಂತ್ ನೂತನ ಪದಾಧಿಕಾರಿಗಳ ನೇಮಕ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಉದ್ದೇಶದಿಂದ ತುಮಕೂರು ನಗರ ಜೆಡಿಎಸ್ ಘಟಕಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ಜೆ.ಎಸ್.ಲಕ್ಷ್ಮಿಕಾಂತ್ ರವರನ್ನ ಹಾಗೂ ತುಮಕೂರು ನಗರ ಜೆಡಿಎಸ್ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಸುಮಾ.ವಿ ರವರನ್ನ ತುಮಕೂರು ನಗರ ಜೆಡಿಎಸ್ ಅಧ್ಯಕ್ಷರಾದ ವಿಜಯ್ ಗೌಡ ಕೆ.ಟಿ ರವರು ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜಿನಪ್ಪರವರ ಆದೇಶದ ಮೇರೆಗೆ ನೇಮಕ ಮಾಡಿದ್ದಾರೆ.
ಪಕ್ಷದ ತತ್ವ ಸಿದ್ದಾಂತಗಳಿಗೆ ಬೆಲೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ಕೂಡಲೇ ತೊಡಗಿಕೊಳ್ಳುವಂತೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಅಧ್ಯಕ್ಷರು ನೂತನ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.