i
ಬಿರುಗಾಳಿ ಮಳೆಗೆ ಚಿತ್ರದುರ್ಗ-ಚಳ್ಳಕೆರೆ ಮಾರ್ಗದ ಮರ ರಸ್ತೆ ಉರುಳಿದ್ದು ರಸ್ತೆ ಜಾಮ್ ಆಗಿದೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಬಿರುಗಾಳಿ ಸಹಿತ ಭಾರೀ ಮಳೆಗೆ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗೇಟ್ ನಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ. ರಸ್ತೆಗೆ ಅಡ್ಡಲಾಗಿ ಉರುಳಿದ ಮರ, ಸಂಚಾರ ಅಸ್ತವ್ಯಸ್ಥವಾಗಿತ್ತು. ಚಳ್ಳಕೆರೆ- ಚಿತ್ರದುರ್ಗ ಮಾರ್ಗ ಮಧ್ಯದಲ್ಲಿ ಉರುಳಿದ ಮರ. ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್. ಮರ ಉರುಳಿದ ಹಿನ್ನೆಲೆ ವಾಹನ ಸವಾರರ ಪರದಾಟ. ಪರ್ಯಾಯ ಮಾರ್ಗದ ಮೂಲಕ ತೆರಳುತ್ತಿರುವ ವಾಹನಗಳು. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.