i
ಹಿರಿಯೂರು ವಿವಿಧ ಮತದಾನ ಕೇಂದ್ರಗಳ ಸ್ಥಾಪನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ನಂ.100 ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಕೆಳಕಂಡ ವಿವಿಧ ಮತದಾನದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅಗತ್ಯ ಸೇವೆಗಳ ಮತದಾರರಿಗೆ ಮತದಾನ ಕೇಂದ್ರ PVC (Postal voting centre) ಸ್ಥಾಪಿಸಿದೆ. ಹಿರಿಯೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗಿದ್ದು, ಈ ಕೇಂದ್ರವು ಇದೇ ಮೇ 2 ರಿಂದ ಮೇ 4 ರವರೆಗೆ ತೆರೆದಿರುತ್ತದೆ. ಅಗತ್ಯ ಸೇವೆಗಳಲ್ಲಿ ನಿರ್ವಹಿಸುವ 27 ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಗೈರು ಹಾಜರಿ ಮತದಾರರು 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಒಟ್ಟು 327 ಜನರಿಗೆ ಮನೆಯಲ್ಲಿ ಮತದಾನ ಮಾಡಿಸಲು 20 ಮಾರ್ಗಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಇದೇ ಮೇ 3ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯ ಒಳಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ಮತದಾರರಿಗೆ ಮುಂಚಿತವಾಗಿ ಮತದಾನದ ದಿನಾಂಕವನ್ನು ಲಿಖಿತ ರೂಪದಲ್ಲಿ ಸೂಚನಾ ಪತ್ರವನ್ನು ನೀಡಲಾಗಿದೆ.
ಚುನಾವಣಾ ಸಿಬ್ಬಂದಿಗೆ Facilitatiom Centre ಅನ್ನು ತಾಲ್ಲೂಕು ಕಚೇರಿಯಲ್ಲಿ ತೆರೆದಿದ್ದು, ಅಂಚೆ ಮೂಲಕ ಪಡೆದ ಮತ ಪತ್ರವನ್ನು ಮತಪೆಟ್ಟಿಗೆಯಲ್ಲಿ ಬಂದು ಹಾಕಲು ವ್ಯವಸ್ಥೆಗೊಳಿಸಲಾಗಿದೆ. ಈ ಮಾಹಿತಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ 12 ಅಭ್ಯರ್ಥಿಗಳಿಗೆ ಮಾಹಿತಿ ನೀಡಿದ್ದು, ಪಾರದರ್ಶಕವಾಗಿ ಮತದಾನ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.