i
ಚಳ್ಳಕೆರೆ ಕಾಂಗ್ರೆಸ್ ಶಾಸಕ ರಘುಮೂರ್ತಿ ಪಡೆದ ಮತಗಳ ಸಂಪೂರ್ಣ ವಿವರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ವಿಜೇತರಾಗಿದ್ದು, ಒಂದು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯು ಜಯಗಳಿಸಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿ.ರಘುಮೂರ್ತಿ 67,363 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಜಾತ್ಯಾತೀತ ಜನತಾ ದಳದ ರವೀಶ್ಕುಮಾರ್.ಎಂ ಅವರಿಗಿಂತ 16,127 ಮತಗಳ ಅಂತರದೊಂದಿಗೆ ವಿಜೇತರಾಗಿದ್ದಾರೆ.
ಜಾತ್ಯಾತೀತ ಜನತಾ ದಳದ ರವೀಶ್ಕುಮಾರ್.ಎಂ 51,236, ಭಾರತೀಯ ಜನತಾ ಪಕ್ಷದ ಅನಿಲ್ ಕುಮಾರ್.ಆರ್ 22,737, ಆಮ್ ಆದ್ಮಿ ಪಕ್ಷದ ಮಾರಕ್ಕ 3069 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭೋಜರಾಜ.ಸಿ 1138, ಪಕ್ಷೇತರ ಅಭ್ಯರ್ಥಿಗಳಾದ ಅಂಜಮ್ಮ 713, ಕೆ.ಟಿ.ಕುಮಾರಸ್ವಾಮಿ 28,928 ಮತಗಳನ್ನು ಪಡೆದಿದ್ದಾರೆ. 1632 ನೋಟಾ ಮತಗಳು ದಾಖಲಾಗಿವೆ. 247 ಮತಗಳು ತಿರಸ್ಕೃತವಾಗಿವೆ.