i
ಜುಲೈ 6ರಂದು ಶಾಲಾ ವಾರ್ಷಿಕೋತ್ಸವ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಭೀಮಸಮುದ್ರ ರಸ್ತೆಯ ಮಾಳಪ್ಪನಹಟ್ಟಿ ಹತ್ತಿರದ ತೀಕ್ಷ್ಣ ಅಂಧರ ಪುನಶ್ವೇತನ ಸಂಸ್ಥೆ ವಿಶೇಷ ವಸತಿ ಶಾಲೆಯ 24ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇದೇ ಜುಲೈ 6ರಂದು ಬೆಳಿಗ್ಗೆ 10ಕ್ಕೆ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಾರ್ಷಿಕೋತ್ಸವದ ಪ್ರಯುಕ್ತ ಪ್ರಸಕ್ತ ಸಾಲಿನಿಂದ ಸಂಸ್ಥೆಯಲ್ಲಿ ಪ್ರತಿದಿನ ಯೋಗ ತರಬೇತಿಯನ್ನು ಆಯೋಜಿಸಿರುತ್ತದೆ. ಯೋಗ ತರಬೇತಿ ಪಡೆಯುವ ಆಸಕ್ತ ಫಲಾನುಭವಿಗಳು ಭಾಗವಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7019877135 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.