i
ಮುರುಘಾ ಮಠದಲ್ಲಿ ಸಿಕ್ಕ ಒಂದು ವರ್ಷದ ಬಾಲಕಿ, ಪತ್ತೆಯಾಗದ ಪೋಷಕರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಮುರುಘಾ ಮಠದಲ್ಲಿ ಒಂದು ವರ್ಷದ ಬಾಲಕಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಬಾಲಕಿಯ ಪೊಷಕರು ಪತ್ತೆಯಾಗದ ಹಿನ್ನೆಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.ಕಾನೂನು ಪರಿವೀಕ್ಷಕಿ ಮಂಜುಳ ದೂರು ದಾಖಲಿಸಿದ್ದಾರೆ. ಮುರುಘಾ ಶ್ರೀ ಫೋಕ್ಸೋ ಕೇಸ್ ವೇಳೆ ಈ ಬಾಲಕಿ ಪತ್ತೆಯಾಗಿದ್ದು ಶಿವಮೂರ್ತಪ್ಪ ಎನ್ನುವ ವ್ಯಕ್ತಿ ಮುರುಘಾ ಮಠಕ್ಕೆ ಬಿಟ್ಟು ಹೋಗಿದ್ದರು ಎನ್ನಲಾಗಿತ್ತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪೊಷಕರ ಹುಡುಕಾಟ ನಡೆಸಿತ್ತು. ಆದರೆ ಇದುವರೆಗೂ ಬಾಲಕಿಯ ಪೋಷಕರು ಪತ್ತೆಯಗಾದ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಲಾಗಿದೆ. IPC ಸೆಕ್ಷನ್ 317 ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.