![](https://www.chandravallinews.com/wp-content/uploads/2023/11/Male--1024x768.jpg)
i
ಚಿತ್ರದುರ್ಗ ಯಲ್ಲೋ ಅಲರ್ಟ್ ಇಂದು ಭಾರೀ ಮಳೆ, ಇಕ್ಕನೂರಿನಲ್ಲಿ 88.8 ಮಿ.ಮೀ ಮಳೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಚಿತ್ರದುರ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಸುರಿದ ಮಳೆಯ ವಿವರದನ್ವಯ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 88.8 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 38.6 ಮಿ.ಮೀ, ಈಶ್ವರಗೆರೆ 66.2 ಮಿ.ಮೀ, ಬಾಬೂರು 30.8 ಮಿ.ಮೀ, ಸುಗೂರು 64.3 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 41.6 ಮಿ.ಮೀ, ಚಿತ್ರದುರ್ಗ-2ರಲ್ಲಿ 36.7 ಮಿ.ಮೀ, ಐನಹಳ್ಳಿ 25.2 ಮಿ.ಮೀ, ಭರಮಸಾಗರ 22 ಮಿ.ಮೀ, ತುರುವನೂರು 49.4 ಮಿ.ಮೀ, ಸಿರಿಗೆರೆ 10 ಮಿ.ಮೀ, ಹಿರೇಗುಂಟನೂರು 5 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 44.6 ಮಿ.ಮೀ, ಬಾಗೂರು 10.5 ಮಿ.ಮೀ, ಮತ್ತೋಡು 20.4 ಮಿ.ಮೀ, ಶ್ರೀರಾಂಪುರ 45 ಮಿ.ಮೀ, ಮಾಡದಕೆರೆ 34.2 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 13.6 ಮಿ.ಮೀ, ಚಿಕ್ಕಜಾಜೂರು 4.2 ಮಿ.ಮೀ, ಬಿ. ದುರ್ಗ 11 ಮಿ.ಮೀ, ತಾಳ್ಯ 12.4 ಮಿ.ಮೀ, ರಾಮಗಿರಿ 4.2 ಮಿ.ಮೀ. ಹೆಚ್ಡಿ ಪುರ 21.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 29.6 ಮಿ.ಮೀ, ಪರುಶುರಾಂಪುರ 2.2 ಮಿ.ಮೀ, ನಾಯಕನಹಟ್ಟಿ 23.2 ಮಿ.ಮೀ, ತಳಕು 28.4 ಮಿ.ಮೀ, ಡಿ.ಮರಿಕುಂಟೆ 29.3 ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 0.2 ಮಿ.ಮೀ, ರಾಯಾಪುರ 5.8 ಮಿ.ಮೀ, ಬಿಜಿಕೆರೆ 5 ಮಿ.ಮೀ ಮಳೆಯಾಗಿದೆ.
10 ಮನೆಗಳು ಭಾಗಶಃ ಹಾನಿ: ಸೋಮವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 10 ಮನೆಗಳು ಭಾಗಶಃ ಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 3 ಮನೆ ಭಾಗಶಃ ಹಾನಿಯಾಗಿದೆ. ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ತಲಾ 1 ಮನೆ ಭಾಗಶಃ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 3 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.