i
ಯುವತಿ ಸುನೀತಾ ರಾಣಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮ ನಿವಾಸಿ ಸುನೀತಾ ರಾಣಿ(20) ಅವರು ಕಾಣೆಯಾಗಿರುವ ಪ್ರಕರಣ 2023ರ ಸೆಪ್ಟೆಂಬರ್ 8 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ಯುವತಿಯ ಚಹರೆ ಇಂತಿದೆ. ಸುನೀತಾ ರಾಣಿ (20 ವರ್ಷ) ತಂದೆ ಓಂಕಾರಪ್ಪ, 4.8 ಅಡಿ ಎತ್ತರ, ಸಾಧರಣ ಮೈಕಟ್ಟು, ಕೋಲುಮುಖ, ಕಪ್ಪು ಮೈ ಬಣ್ಣ, ಎಡಕೈಯಲ್ಲಿ ಎಸ್ಒ ಎಂಬ ಹಚ್ಚೆಯ ಗುರುತು ಇದೆ, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ಈ ಮೇಲ್ಕಂಡ ಯುವತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ಹೊಳಲ್ಕೆರೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.