
ಕಾಂಗ್ರೆಸ್ ಪಕ್ಷದ ಸರ್ವಶಕ್ತಿಯಾಗಿದ್ದ ಇಂದಿರಾ ಗಾಂಧಿ:ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಾಂಗ್ರೆಸ್ ಪಕ್ಷದ ನೆಚ್ಚಿನ ಮಾಜಿ ಪ್ರಧಾನಿ, ರಾಷ್ಟ್ರದ ಮೊಟ್ಟಮೊದಲ ಮಹಿಳಾ ಪ್ರಧಾನಿ ಎಂಬ ಖ್ಯಾತಿಗೆ ಒಳಗಾಗಿದ್ದ ದಿವಂಗತ ಇಂದಿರಾಗಾಂಧಿಯವರ ೧೦೬ನೇ ಜನ್ಮದಿನವನ್ನು ನಾವೆಲ್ಲರೂ ಸಂಭ್ರಮ, ಸಡಗರಗಳಿಂದ ಆಚರಣೆ ಮಾಡುತ್ತಿದ್ದು, ಇಂದಿರಾಗಾಂಧಿಯವರ ಆದರ್ಶಗಳು ನಮ್ಮೆಲ್ಲರಿಗೂ ಮಾರ್ಗದರ್ಶನವೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಅವರು, ಇಲ್ಲಿನ ಶಾಸಕರ ಭವನದಲ್ಲಿ ದಿವಂಗತ ಇಂದಿರಾಗಾಂಧಿಯವರ ೧೦೬ನೇ ಜನ್ಮದಿನ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನೆಹರೂ ಕುಟುಂಬದ ಕೊಡುಗೆ ಅಪಾರವಾಗಿದೆ. ರಾಷ್ಟ್ರ ಮೊಟ್ಟಮೊದಲ ಪ್ರಧಾನಮಂತ್ರಿ ದಿವಂಗತ ಜವಹರಲಾಲ್ ನೆಹರೂರವರ ಪುತ್ರಿಯಾದ ಇಂದಿರಾಗಾಂಧಿಯೂ ಸಹ ದೇಶವನ್ನು ಸಮರ್ಥವಾಗಿ ನಿಬಾಯಿಸಿದವರು. ೨೦ ಅಂಶಗಳ ಕಾರ್ಯಕ್ರಮ ಗರೀಬಿ ಹಠಾವೋ, ಉಳುವವನೇ ಭೂಮಿಯ ಒಡೆಯ ಇಂತಹ ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತಂದು ಬಡ ಜನತೆಯ ಸುರಕ್ಷತೆಗೆ ಇಂದಿರಾಗಾಂಧಿಯವರ ಭದ್ರ ಅಡಿಪಾಯ ಹಾಕಿದರು. ಕಾಂಗ್ರೆಸ್ ಪಕ್ಷದ ಸರ್ವಶಕ್ತಿಯಾಗಿ ಹೊರಹೊಮ್ಮಿದ್ದರು ಎಂದರು. ಕುಶಲಕರ್ಮಿ ವಿಭಾಗದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ದೇಶದಲ್ಲಿ ನಿರಂತರ ಬರಗಾಲ ತಾಂಡವಾಡುತ್ತಿತ್ತು, ಜನರು ಹೊಟ್ಟೆಗೆ ತಿನ್ನಲು ರಾಷ್ಟ್ರದಲ್ಲಿ ಆಹಾರದ ಕೊರತೆ ಎದ್ದು ಕಾಣುತ್ತಿತ್ತು. ರೈತರೂ ಸಹ ಜಮೀನುಗಳಲ್ಲಿ ಬೆಳೆ ಬೆಳೆಯದೆ ಕಂಗಾಲಾಗಿದ್ದರು. ಇಡೀ ದೇಶವೇ ಹಸಿವಿನಿಂದ ಕಂಗೆಟ್ಟಿತ್ತು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜ್ಞೆಯೂ ತನ್ನ ಹಸಿವನ್ನು ನೀಗಿಸಿಕೊಳ್ಳಲು ಸರ್ಕಾರದತ್ತ ದೃಷ್ಠಿಹಾಯಿಸಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಕೆಂಪುಜೋಳ ತಂದು ಅದನ್ನು ಬಡ ಜನರಿಗೆ ಹಂಚಿ ಕೋಟಿ, ಕೋಟಿ ಜನರ ಹಸಿವಿಗೆ ಆಸರೆಯಾದರು. ಇಂತಹ ಮಹಾನ್ ಶಕ್ತಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದು ನಾವೆಲ್ಲರೂ ಇಂದಿರಾಗಾಂಧಿಯವರ ಆದರ್ಶಗಳ ಪ್ರೇರಣೆ ಪಡೆಯೋಣವೆಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಎಸ್.ಸೈಯದ್, ಟಿ.ಆರ್.ಕಿರಣ್ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಶಶಿಧರ, ಜಿಲ್ಲಾ ಪಂಚಾಯಿತಿ ಕೆಡಿಪಿ ನಾಮಿನಿ ಸದಸ್ಯ ಓ.ರಂಗಸ್ವಾಮಿ(ತಬಲ), ಬಡಗಿಪಾಪಣ್ಣ, ಶಿವಕುಮಾರಸ್ವಾಮಿ, ಮೈಲಾರಪ್ಪ, ನಗರಸಭಾ ಸದಸ್ಯ ರಮೇಶ್ಗೌಡ, ಅನ್ವರ್ಮಾಸ್ಟರ್, ಕವಿತಾಮೂರ್ತಿ, ಸುಜಾತ, ಪರಸಪ್ಪ ಮುಂತಾದವರು ಉಪಸ್ಥಿತರಿದ್ದರು.