i
9ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಗೆ ಕೆಎಸ್ಆರ್ಟಿಸಿ ಸಂಸ್ಥೆ ಭಾಜನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣೆ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆಎಸ್ಆರ್ಟಿಸಿ ಸಂಸ್ಥೆಗೆ ಲಭಿಸಿರುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸತತ 9ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರಶಸ್ತಿಯನ್ನು ಎ.ಎಸ್.ಸಿ. ಸೆಂಟರ್ ಅಂಡ್ ಕಾಲೇಜ್ನ ಎವಿಎಸ್ಎಂ, ವಿಎಸ್ಎಂ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಿ.ಕೆ. ರಪ್ಸವಾಲ್ ಅವರು ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಜಾಗೃತ ನಿರ್ದೇಶಕf ಡಾ. ನಂದಿನಿ ದೇವಿ.ಕೆ, ಅವರಿಗೆ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ವೆಂಕಟೇಶ ರೆಡ್ಡಿ ಜಿ.ಎ, (ನಿವೃತ್ತ), ಎವಿಎಸ್ಎಂ, ಎಸ್ಸಿ, ವಿಎಸ್ಎಂ, ಬ್ರಿಗೇಡಿಯರ್ ಎಮ್. ಬಿ. ಶಶಿಧರ್ (ನಿವೃತ್ತ) ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಏರ್ ಕಮಾಂಡರ್. ಬಿ.ಎಸ್. ಕನ್ವಾರ್, ವಿಎಸ್ಎಂ, ಡಿಡಿಜಿ. ಎನ್.ಸಿಸಿ., ಹಾಗೂ ಬ್ರಿಗೇಡಿಯರ್ ಎಂ.ಆರ್.ಕೆ. ರಾಜೇಶ್ ಪಣೀಕರ್ ಸ್ಟೇಶನ್ ಕಮಾಂಡರ್ ಕೆ. ಅಂಡ್ ಕೆ. ಸಬ್ ಏರಿಯಾ ಅವರು ಉಪಸ್ಥಿತರಿದ್ದರು.