i
ಅನಾಮಧೇಯ ಮಹಿಳೆಯ ಶವ ಪತ್ತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗೇಟ್ಗಳ ಮಧ್ಯ ಸೇತುವೆ ಹತ್ತಿರ ಎನ್ಹೆಚ್-369 ರಸ್ತೆಯಲ್ಲಿ ಸುಮಾರು 30-35 ವರ್ಷದ ಹೆಂಗಸಿನ ಅನಾಮಧೇಯ ಶವ ಪತ್ತೆಯಾಗಿರುವ ಪ್ರಕರಣ 2023ರ ಡಿ.17 ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸುಮಾರು 30-35ವರ್ಷ, ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು 12 ಇಂಚು ಕಪ್ಪು ಕೂದಲು ಹೊಂದಿರುವ ಮೃತ ಮಹಿಳೆ ಮೈಮೇಲೆ ಬಣ್ಣದ ಹೂಗಳುಳ್ಳ ನೈಟಿ ಧರಿಸಿದ್ದಾಳೆ. ಈ ಹೆಂಗಸಿನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಹೊಳಲ್ಕೆರೆ ಪೆÇಲೀಸ್ ಠಾಣೆ 08191-275233, ಹೊಳಲ್ಕೆರೆ ವೃತ್ತ ನಿರೀಕ್ಷಕರ ಕಚೇರಿ 08191-275376, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರ ಕಚೇರಿ 08194-2224304, ಚಿತ್ರದುರ್ಗ ಜಿಲ್ಲಾ ಕಂಟ್ರೋಲ್ ರೂಂ 08194-222782 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.