i
ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ನಿಗಧಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ವರ್ಷದ (ಜುಲೈ / ಜನವರಿ ಆವೃತ್ತಿ) ಸಿ.ಬಿ.ಸಿ.ಎಸ್. ಸ್ನಾತಕ/ಸ್ನಾತಕೋತ್ತರ ಪದವಿಗಳಾದ ಬಿ.ಬಿ.ಎ./ ಬಿ.ಸಿ.ಎ./ ಎಲ್ಲಾ ಬಿ.ಎಸ್ಸಿ./ ಎಂ.ಎ./ ಎಂ.ಕಾಂ./ ಎಂ.ಬಿ.ಎ./ ಎಲ್ಲಾ ಎಂ.ಎಸ್ಸಿ. ಕೋರ್ಸುಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ತೃತೀಯ ಸೆಮಿಸ್ಟರ್ನ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ನಿಗಧಿಪಡಿಸಲಾಗಿದೆ.
ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಜನವರಿ 13 ಹಾಗೂ ರೂ. 200/- ದಂಡ ಶುಲ್ಕದೊಂದಿಗೆ ಜನವರಿ 23 ಕೊನೆಯ ದಿನಾಂಕವಾಗಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ www.ksoumysuru.ac.in ಮೂಲಕ ಪರೀಕ್ಷಾ ಶುಲ್ಕ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರು ಪ್ರಾದೇಶಿಕ ಕೇಂದ್ರ, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-560026, ದೂರವಾಣಿ ಸಂಖ್ಯೆ: 080-2660 3664 ಹಾಗೂ 98449-65515ನ್ನು ಸಂಪರ್ಕಿಸುವುದು ಎಂದು ಎಂದು ಪ್ರಾದೇಶಿಕ ನಿರ್ದೇಶಕರಾದ ದಿಲೀಪ. ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.