i
ಆರ್ಥಿಕ ವಿಶ್ಲೇಷಕ ಪರೋಪಕಾರಂ ತಂದೆ ರಾಮ್ ರಾವ್ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ಅಶೋಕ ರಸ್ತೆಯ ನಿವಾಸಿ ಆರ್ಥಿಕ ವಿಶ್ಲೇಷಕ ಪರೋಪಕಾರಂ ತಂದೆ ರಾಮ್ರಾವ್ ಡಿ.ಎನ್(71) ಅವರು ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ನ ವಿದೇಶಿ ವಿನಿಮಯ ವಿಭಾಗದಲ್ಲಿ ಆರ್ಥಿಕ ವಿಶ್ಲೇಷಕರಾಗಿರುವ ಪುತ್ರ ಪರೋಪಕಾರಂ ಸೇರಿದಂತೆ ಕುಟುಂಬದ ಸದಸ್ಯರಾದ ಕಿರಣ್ ಆರ್, ಸೊಸೆ ಕೀರ್ತಿ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ರಾಮ್ರಾವ್ ಅವರ ನಿಧನಕ್ಕೆ ಪರೋಪಕಾರಂ ಕುಟುಂಬದ ಸದಸ್ಯರು ಸಂತಾಪ ಸೂಚಿಸಿದ್ದಾರೆ.