i
ಆಯೋಗದ ಕಾನೂನು ಕೋಶದ ಮುಖ್ಯಸ್ಥರ ಅಧಿಸೂಚನೆ ರದ್ದು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್ಸಿ ಆಯೋಗದ ಅಧ್ಯಕ್ಷರು ಹಾಗೂ ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳೆಲ್ಲರೂ ಚರ್ಚಿಸಿ ಈಗಾಗಲೇ ನೇಮಕಾತಿ ಪೂರ್ಣಗೊಂಡಿರುವ ಕಾನೂನು ಕೋಶದ ಮುಖ್ಯಸ್ಥರ ಹುದ್ದಗೆ ಈ ಹಿಂದೆ ನವೆಂಬರ್ 15, 2023 ರಂದು ಜಾರಿ ಮಾಡಿರುವ ಅಧಿಸೂಚನೆಯನ್ನು ಹಿಂಪಡೆದಿರುವುದು ಮತ್ತು ಸದರಿ ಹುದ್ದೆಗೆ ಆಯೋಗದ ಗಮನಕ್ಕೆ ತರದೇ ಹೊಸದಾಗಿ ನೇಮಕಾತಿ ಆರಂಭಿಸಲು ಜನವರಿ 9, 2024 ರಂದು ಕಾರ್ಯವ್ಯಾಪ್ತಿಯನ್ನು ಮೀರಿ ಅಧಿಸೂಚನೆಯನ್ನು ಜಾರಿ ಮಾಡಿರುವುದನ್ನು ರದ್ದುಪಡಿಸಿ ಅದನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಬೇಕೆಂದು ನಿರ್ಣಯಿಸಲಾಯಿತು.
ಜನವರಿ 9, 2024 ರಂದು ಆಯೋಗದ ಕಾರ್ಯದರ್ಶಿಯವರು ಜಾರಿ ಮಾಡಿರುವ ಅಧಿಸೂಚನೆಯು, ಆಯೋಗದ ಗಮನಕ್ಕೆ ತರದೇ ಮತ್ತು ಆಯೋಗದ ನಿರ್ಣಯವಿಲ್ಲದೇ ಹೊರಡಿಸಿರುವುದು ಕ್ರಮಬದ್ಧವಾಗಿಲ್ಲದ ಕಾರಣ ಅಧಿಸೂಚನೆಯನ್ನು ಆಯೋಗವು ರದ್ದುಪಡಿಸಿ ನಿರ್ಣಯಿಸಿದೆ ಎಂದು ಕೆಪಿಎಸ್ಸಿ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.