i
ನಿವೃತ್ತ ಉಪನ್ಯಾಸಕ ಪ್ರೊ. ತಿಮ್ಮಪ್ಪ ಗೌಡ ನಿಧನ…
ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ:
ಇಲ್ಲಿಯ ತುಂಗಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಪ್ರೊ.ತಿಮ್ಮಪ್ಪ ಗೌಡ(70) ಅವರು ಫೆ.11 ರಂದು ಭಾನುವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಪ್ರೊ.ತಿಮ್ಮಪ್ಪ ಗೌಡ ತಮ್ಮ ಉತ್ತಮ ಬೋಧನೆಯಿಂದಾಗಿ ಕಾಲೇಜಿನಲ್ಲಿ ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದರು. ಗೌಡರು ಪತ್ನಿ ಗಾಯತ್ರಿ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗೌಡರ ಹಿರಿಯ ಪುತ್ರ ಅನಿಕೇತನ್ ಕೆಲವು ಕಾಲ ತೀರ್ಥಹಳ್ಳಿ ತಾಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಆಗುಂಬೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕರ್ತವ್ಯದಲ್ಲಿದ್ದಾರೆ. ಮತ್ತೊರ್ವ ಪುತ್ರ ನಚಿಕೇತನ್ ವಿದೇಶದಲ್ಲಿ ನೌಕರಿಯಲ್ಲಿದ್ದಾರೆ.
ತಿಮ್ಮಪ್ಪ ಗೌಡರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವು ಫೆ.12ರಂದು ಮೋಸವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಗೌಡರ ಕುಟುಂಬದವರು ತಿಳಿಸಿದ್ದಾರೆ.