i
SBI ಸೇರಿ 3 ಬ್ಯಾಂಕ್ಗಳಿಗೆ ಭಾರಿ ದಂಡ ವಿಧಿಸಿದ RBI…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸೇವಾ ಸಂಸ್ಥೆ ಎಸ್ ಬಿಐ ಸೇರಿದಂತೆ 3 ಬ್ಯಾಂಕ್ ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಭಾರಿ ದಂಡ ಹೇರಿದೆ.
ಈ ಹಿಂದಷ್ಟೇ ಅಂದರೆ ಮಾರ್ಚ್15ರಿಂದ ಪೇಟಿಎಂ ಪೇಮೆಂಟ್ಸ್ಬ್ಯಾಂಕ್ವಹಿವಾಟು ಸ್ಥಗಿತಗೊಳಿಸಿದ್ದ ಆರ್ ಬಿಐ ಇದೀಗ ದೇಶದ ಮೂರು ಪ್ರಮುಖ ಬ್ಯಾಂಕ್ ಗಳಿಗೆ ಭಾರಿ ಪ್ರಮಾಣದ ದಂಡ ಹೇರಿದೆ. ಭಾರತೀಯ ಸ್ಟೇಟ್ಬ್ಯಾಂಕ್(SBI), ಕೆನರಾ ಬ್ಯಾಂಕ್ಹಾಗೂ ಸಿಟಿ ಯೂನಿಯನ್ಬ್ಯಾಂಕ್ಗಳಿಗೆ (City Union Bank) ಸುಮಾರು 3 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಆರ್ ಬಿಐ ಸಾಲ ಮರುಪಾವತಿಸಿದ 30 ದಿನದೊಳಗೆ ಆಸ್ತಿ ದಾಖಲೆ ವಾಪಸ್ ನೀಡಿ; ತಡ ಮಾಡಿದರೆ ದಿನಕ್ಕೆ 5 ಸಾವಿರ ರು. ದಂಡ:
ಆರ್ಬಿಐ ನಿಬಂಧನೆಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ. ಮೂಲಗಳ ಪ್ರಕಾರ ಎಸ್ಬಿಐಗೆ 2 ಕೋಟಿ ರೂ. ದಂಡ ವಿಧಿಸಲಾಗಿದ್ದು, ಠೇವಣಿದಾರರ ಶೈಕ್ಷಣಿಕ ಜಾಗೃತಿ ಫಂಡ್ಯೋಜನೆ (2014) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಿದೆ.
ಅಂತೆಯೇ ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಸೇರಿ ಹಲವು ಕಾರಣಗಳಿಂದಾಗಿ ಸಿಟಿ ಯುನಿಯನ್ಬ್ಯಾಂಕ್ಗೆ 66 ಲಕ್ಷ ರೂ. ದಂಡ ವಿಧಿಸಿದೆ. ಮತ್ತೊಂದೆಡೆ, ಆರ್ಬಿಐ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಕೆನರಾ ಬ್ಯಾಂಕ್ಗೆ 32.30 ಲಕ್ಷ ರೂ. ದಂಡ ವಿಧಿಸಿದೆ.