i
ಮೈಸೂರು ಮೃಗಾಲಯದಲ್ಲಿ ಮೃಗಾಲಯ ದಿನಾಚರಣೆ ಆಚರಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ಮೃಗಾಲಯ ಎಂದೇ ವಿಶ್ವಪ್ರಸಿದ್ಧವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಪ್ರತಿ ವರ್ಷ ಫೆಬ್ರವರಿ 22ನೇ ತಾರೀಖಿನಂದು ಮೃಗಾಲಯದ ಸಂಸ್ಥಾಪಕರಾದ ಗೌರವಾನ್ವಿತ ಶ್ರೀ ಚಾಮರಾಜೇಂದ್ರ ಒಡೆಯರ್ ಬಹೂದ್ದೂರ್ ಅವರ ಜನ್ಮದಿನದ ಗೌರವಾರ್ಥವಾಗಿ ಮೃಗಾಲಯ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಈ ವರ್ಷದ ಮೃಗಾಲಯ ದಿನಾಚರಣೆಯ ಪ್ರಯುಕ್ತ ಈ ತಿಂಗಳ ಪ್ರತಿ ಮಂಗಳವಾರಗಳಂದು ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಕಾರ್ಯಕ್ರಮಗಳಲ್ಲಿ ಮೃಗಾಲಯದ ಎಲ್ಲಾ ಸಿಬ್ಬಂದಿ/ನೌಕರರುಗಳು ಬಹಳ ಉತ್ಸಾಹದಿಂದ ಭಾಗವಹಿಸಿರುತ್ತಾರೆ. ಇಂದು ಮೃಗಾಲಯ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಮೃಗಾಲಯದ ಎಲ್ಲಾ ಸಿಬ್ಬಂದಿ/ನೌಕರರುಗಳಿಗೆ ಹೊಸ ಸಮವಸ್ತ್ರವನ್ನು ವಿತರಿಸಲಾಗಿದೆ. ಇಂದಿನ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳಲ್ಲಿ ವಿಜೇತರಾದ ಸಿಬ್ಬಂದಿ, ನೌಕರರುಗಳಿಗೆ ಬಹುಮಾನ ವಿತರಣೆ ಮಾಡುವುದರೊಂದಿಗೆ ಮೃಗಾಲಯದಲ್ಲಿ ಅರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿರುವ ಪ್ರಾಣಿಪಾಲಕರುಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.