i
ಖ್ಯಾತ ವಕೀಲರಾದ ದಾಸಯ್ಯನ ಮಾಳಿಗೆ ಮಹೇಶ್ವರಪ್ಪ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ:
ಚಿತ್ರದುರ್ಗ ನಗರದ ಕೆಳಗೋಟೆ, ಚರ್ಚ್ ಬಡಾವಣೆ ನಿವಾಸಿ ದಾಸಯ್ಯನ ಮಾಳಿಗೆ ಎಂ ಮಹೇಶ್ವರಪ್ಪ(88) ಶುಕ್ರವಾರ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಹಿರಿಯೂರು ತಾಲ್ಲೂಕು ಐಮಂಗಳ ಹೋಬಳಿಯ ದಾಸಯ್ಯನ ಮಾಳಿಗೆಯಲ್ಲಿರುವ ಜಮೀನಿನಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ವಕೀಲರಾದ ಎಂ. ಸುರೇಶ್ ತಿಳಿಸಿದ್ದಾರೆ.
ಅಂತಿಮ ದರ್ಶನ: ಚಿತ್ರದುರ್ಗ ನಗರದ ಕೆಳಗೋಟೆ, ಚರ್ಚ್ ಬಡಾವಣೆಯ 4ನೇ ಕ್ರಾಸ್ ನಲ್ಲಿರುವ ಸ್ವಗೃಹದಲ್ಲಿ ಮಾರ್ಚ್-9 ರಂದು ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಂತಿಮ ನಮನ: ಚಿತ್ರದುರ್ಗ ನಗರದ ಹಿರಿಯ ವಕೀಲರಾದ ಎಂ ಮಹೇಶ್ವರಪ್ಪ ಇವರ ನಿಧನದಿಂದ ಅಪಾರ ನೋವು ಆಘಾತ ಉಂಟಾಗಿದೆ ಎಂದು ಮೃತರ ಆತ್ಮೀಯ ಸ್ನೇಹಿತರು ಹಾಗೂ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎನ್.ಜಿ ಕೃಷ್ಣಮೂರ್ತಿ, ಎಂ. ಸುರೇಶ್ ಇವರು ತಿಳಿಸಿ, ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.