i
ಶ್ರೀನಿಧಿ ವೈನ್ಸ್ ಸಮೀಪ ಅಪರಿಚಿತ ಶವ ಪತ್ತೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೋರಾ ಪೊಲೀಸ್ ಠಾಣೆ ವ್ಯಾಪ್ತಿ ಸೋರೆಕುಂಟೆ ಗೇಟ್ ಸಮೀಪದ ಶ್ರೀನಿಧಿ ವೈನ್ಸ್ ಎದುರಿಗೆ ಕೆಂಪನದೊಡ್ಡೇರಿ ರಾಘವೇಂದ್ರ ಅವರ ಅಂಗಡಿ ಮುಂಭಾಗದ ಕಡಪ ಕಲ್ಲಿನ ಮೇಲೆ ಸುಮಾರು ೬೦ ವರ್ಷದ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತನು ೧೬೨ ಸೆಂ.ಮೀ. ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಬಲ ಮೊಣಕೈಯಲ್ಲಿ ಇಂದ್ರಮ್ಮ, ಮಂಜುನಾಥ್, ಭಾಗ್ಯಮ್ಮ ಎಂದು ಕನ್ನಡದಲ್ಲಿ ಅಚ್ಚೆ ಇರುತ್ತದೆ. ಮೃತನ ಮೈಮೇಲೆ ಪಿಂಕ್ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಹಸಿರು ಬಣ್ಣದ ಬರಮೋಡ ನಿಕ್ಕರ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಮೊ.ಸಂ.೯೪೮೦೮೦೨೯೦೦-೨೦-೩೧-೪೯ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.