i
ಅಕ್ರಮ ಮದ್ಯಮಾರಾಟ ಓರ್ವನ ವಿರುದ್ದ ಪ್ರಕರಣ ದಾಖಲು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇಲ್ಲಿನ ಸೂಜಿಮಲ್ಲೇಶ್ವರ ನಗರದ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕ ಮಹಲಿಂಗಪ್ಪನ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಪಿಎಸ್ಐ ಧರೆಪ್ಪ ಬಾಳಪ್ಪ ದೊಡ್ಡಮನಿ ಸೂಜಿ ಮಲ್ಲೇಶ್ವರ ನಗರದ ಮಹಲಿಂಗಪ್ಪ ಎಂಬ ವ್ಯಕ್ತಿ ತನ್ನ ಚಿಲ್ಲರೆ ಅಂಗಡಿಯಲ್ಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಅಂದಾಜು ಮೌಲ್ಯ ೪೯೬೨ರೂನ ಸುಮಾರು ೮೮೨೦ ಲೀಟರ್ ಅಕ್ರಮ ಮದ್ಯವನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.