i
ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಇಲ್ಲಿನ ಸಿಮ್ಸ್ ಕಾಲೇಜಿನ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಿಮ್ಸ್ ಕಾಲೇಜಿನ ವಿದ್ಯಾರ್ಥಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ವಿದ್ಯಾರ್ಥಿ ನಿನ್ನೆ ರಾತ್ರಿ ಕೊನೆ ಉಸಿರು ಎಳೆದಿದ್ದಾನೆ. ಈತನ ಆತ್ಮಹತ್ಯೆಯ ಕಾರಣ ಗೊತ್ತಾಗಿಲ್ಲ.
ಮೂಲತಃ ಮಂಡ್ಯದ ಮಳವಳ್ಳಿಯ ನಿವಾಸಿಯಾಗಿರುವ ಯುವಕ ಶಿವಮೊಗ್ಗದ ಸಿಮ್ಸ್ ಹಾಸ್ಟೆಲ್ ನಲ್ಲಿಯೇ ವಾಸವಾಗಿದ್ದನು.