![](https://www.chandravallinews.com/wp-content/uploads/2024/03/06eb0bc8-d7c8-4e05-8030-e570bb285599-6.jpg)
i
ಗಂಡನ ಮನೆಯಲ್ಲಿ ಕಿರುಕುಳ: ಸಾಫ್ಟ್ ವೇರ್ ಉದ್ಯೋಗಿ ಆತ್ಮಹತ್ಯೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಸಾಫ್ಟ್ವೇರ್ ಉದ್ಯೋಗಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಡಿಕೊಪ್ಪದಲ್ಲಿ ಸಂಭವಿಸಿದೆ.
ಮಹಿಳೆಯ ಪತಿ ಹಾಗೂ ಅತ್ತೆ ಮಾವನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಿಳೆಯು ಪತಿಯ ಮನೆಯಲ್ಲಿ ತನಗಾಗುತ್ತಿರುವ ತೊಂದರೆಯನ್ನು ತವರು ಮನೆಯವರ ಬಳಿ ಹೇಳಿಕೊಂಡಿದ್ದಳು. ಸಾಯುವುದಕ್ಕೂ ಕೆಲಹೊತ್ತಿಗೂ ಮೊದಲೇ ಆಡಿದ ಮಾತುಗಳನ್ನು ಫೋನ್ ಕರೆಯಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತವರು ಮನೆಯವರು ವಿಚಾರಿಸಲು ಮಹಿಳೆಯ ಗಂಡನ ಮನೆಗೆ ಹೋದಾಗ ಆಕೆ ಬಾಗಿಲು ಹಾಕಿಕೊಂಡು ರೂಮಿನಲ್ಲಿರುವುದು ಗೊತ್ತಾಗಿದೆ.
ಬಾಗಿಲು ತಟ್ಟಿದರೂ ತೆರೆಯದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳಗೆ ನೋಡಿದ್ರೆ ಮಹಿಳೆ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸರಿಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ಕುಟುಂಬಸ್ಥರು ಮಹಿಳೆಯ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ವರದಕ್ಷಿಣೆಗಾಗಿ ತೊಂದರೆ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ.