i
ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಗುಬ್ಬಿ ವೃತ್ತ ಕಚೇರಿ ವ್ಯಾಪ್ತಿ ಕಂಚಿಗಾನಹಳ್ಳಿ ಗ್ರಾಮದ ಸರ್ವೆ ನಂ.೨ರ ತೆಂಗಿನ ತೋಟಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಣ್ಣಿನ ರಸ್ತೆಯಲ್ಲಿ ಸುಮಾರು ೩೦ ವರ್ಷದ ಅಪರಿಚಿತ ಮಹಿಳೆಯ ಶವವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತೆಯನ್ನು ಯಾರೋ ಕುತ್ತಿಗೆಗೆ ಬಟ್ಟೆಯ ವೇಲ್ನಿಂದ ಬಿಗಿದು ಕೊಲೆ ಮಾಡಿ ನಂತರ ಕೊಲೆಯನ್ನು ಮರೆ ಮಾಚಲು ಯಾವುದೇ ಇಂಧನ ಹಾಕಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಅಂಗಾತವಾಗಿ ಬಿದ್ದಿರುತ್ತದೆ ಎಂದು ದೂರು ದಾಖಲಾಗಿದೆ.
ಮೃತಳು ೧೫೬ ಸೆಂ.ಮೀ. ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ದೂ.ವಾ.ಸಂ. ೦೮೧೬-೨೨೭೮೦೦೦, ೦೮೧೩೫-೨೭೫೧೮೪, ೦೮೧೩೧-೨೨೨೨೧೦/ ೨೪೨೨೨೨, ಮೊ.ಸಂ.೯೪೮೦೮೦೨೯೦೦-೨೧-೩೫-೬೧ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.