i
ಪಿಎಚ್ ಡಿ ಪದವಿಗೆ ಎನ್ಇಟಿ ಅಂಕ ಪರಿಗಣನೆಗೆ ಭಾರೀ ವಿರೋಧ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತಾದ್ಯಂತ ಡಾಕ್ಟರೇಟ್ ಆಫ್ ಫಿಲಾಸಫಿ (ಪಿಎಚ್ಡಿ) ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಯ ಅಂಕವನ್ನು ಪರಿಗಣಿಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಇತ್ತೀಚಿನ ನಿರ್ಧಾರವನ್ನು ಕರ್ನಾಟಕದ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಸೇರಿ ವಿಶ್ವವಿದ್ಯಾನಿಲಯಗಳು ವಿರೋಧಿಸಿವೆ.
ಪಿಎಚ್ಡಿ ಪ್ರವೇಶಕ್ಕಾಗಿ ನೆಟ್ ಅಂಕಗಳನ್ನು ಪರಿಗಣಿಸುವ ಯುಜಿಸಿಯ ನಿರ್ಧಾರದಿಂದ ವಿದ್ಯಾರ್ಥಿಗಳು ಹಲವು ಪರೀಕ್ಷೆ ಬರೆಯುವುದನ್ನು ತಪ್ಪಿಸುತ್ತದೆ. ಪಿಎಚ್ಡಿ ಪ್ರವೇಶಕ್ಕಾಗಿ ಪ್ರತಿಯೊಂದು ವಿವಿಯ ಪ್ರವೇಶ ಪರೀಕ್ಷೆ ಬರೆಯಬೇಕಾಗಿಲ್ಲ ಎಂದು ಯುಜಿಸಿ ತನ್ನ ನಿಲುವನ್ನು ಸಮರ್ಥಿಸಿಕೊಂಢಿದೆ. ಮಾರ್ಚ್ 13ರಂದು ನಡೆದ ಸಭೆಯಲ್ಲಿ ಯುಜಿಸಿ ಈ ತೀರ್ಮಾನವನ್ನು ಪ್ರಕಟಿಸಿತ್ತು.
ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು, “ಯುಜಿಸಿ ತೀರ್ಮಾನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಮಧ್ಯಸ್ಥಗಾರರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಸಂಗ್ರಹಿಸಲಿದೆ. ಯುಜಿಸಿಯ ಕ್ರಮವು ಬಹಳ ಗಂಭೀರವಾದುದು. ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹೀಗಾಗಿ ಯುಜಿಸಿಯ ಸಾರ್ವಜನಿಕ ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತದೆ” ಎಂದು ಹೇಳಿದರು.
ಪಿಎಚ್ಡಿ ಪ್ರವೇಶಕ್ಕೆ ನೆಟ್ ಅಂಕ; ವಿವಿಗಳ, ಶಿಕ್ಷಣ ತಜ್ಞರ ವಿರೋಧ ಯಾಕೆ
“ಯುಜಿಸಿಯ ನಿರ್ಧಾರವು ಸಂಶೋಧನೆಗೆ ಅನುಕೂಲವಾಗುವುದು ಎಂಬ ವಾದ ಸರಿ. ಆದರೆ ಅದು ವಿಶ್ವವಿದ್ಯಾಲಯಗಳ ಸ್ವಾಯತ್ತೆಯನ್ನು ಹಾಳುಮಾಡುತ್ತದೆ. ಅನುದಾನ ನೀಡುತ್ತದೆ ಎಂಬ ಕಾರಣಕ್ಕೆ ಯುಜಿಸಿ ವಿವಿಗಳ ಮೆಲೆ ಸವಾರಿ ಮಾಡಬಾರದು. ಪಿಎಚ್ಡಿ ಸೇರಿ ಯಾವುದೇ ಕೋರ್ಸ್ನ ಪ್ರವೇಶ ಪರೀಕ್ಷೆಗಳು, ಶುಲ್ಕ ಮತ್ತು ಇತರ ವಿಷಯಗಳನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ವಿಶ್ವವಿದ್ಯಾಲಯಗಳಿಗೆ ಬಿಡಬೇಕು” ಎಂದು ವಿಶ್ವವಿದ್ಯಾಲಯದ ಉಪಕುಲಪತಿಯೊಬ್ಬರು ತಿಳಿಸಿರುವುದಾಗಿ ವರದಿ ಯಾಗಿದೆ.