i
ಬಸ್ ಬ್ರೇಕ್ ಫೇಲ್: ಹತ್ತಾರು ಬೈಕ್ ಜಖಂ…
ಚಂದ್ರವಳ್ಳಿ ನ್ಯೂಸ್,
ಸಾಗರ: Bus brake failure: Dozens of bikes injured…
ಖಾಸಗಿ ಬಸ್ ಒಂದು ಬ್ರೇಕ್ ಫೇಲಾಗಿ 9 ರಿಂದ 10 ಬೈಕ್ ಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಬಸ್ ನಿಲ್ದಾಣದ ಬಳಿ ನಿನ್ನೆ ನಡೆದಿದೆ.
ಸಾಗರ ನಗರದಲ್ಲಿ ಹಳೆಬಸ್ ನಿಲ್ದಾಣದ ಹತ್ತಿರ ಗಜಾನನ ಸಾರಿಗೆ ಸಂಸ್ಥೆಗೆ ಸೆರಿದ KA 15 2944 ಬಸ್ ಪ್ರಯಾಣಿಕರನ್ನು ಇಳಿಸಿದ ನಂತರದಲ್ಲಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಅಪಘಾತದಲ್ಲಿ 9ಕ್ಕೂ ಹೆಚ್ಚು ಬೈಕ್ ಗಳು ನಜ್ಜುಗುಜ್ಜಾಗಿದೆ ಎಂದು ಸ್ಥಳೀಯ ವೆಬ್ ಸೈಟ್ ಒಂದು ವರದಿ ಮಾಡಿದೆ.
ಬಸ್ ಬ್ರೇಕ್ ಫೇಲ್ ಆದ ಪರಿಣಾಮ ಬಸ್ ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿದ್ದಂತ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, 10ಕ್ಕೂ ಹೆಚ್ಚು ಬೈಕ್ ಗಳು ನಜ್ಜುಗುಜ್ಜಾಗಿದೆ.
ನಿನ್ನೆ ಸಂಜೆ 5.50ರ ಸುಮಾರಿಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಸರಣಿ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.