i
ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೈಮಗ್ಗ ಮತ್ತು ಜವಳಿ ಇಲಾಖೆಯು ರೇಷ್ಮೆ, ಹತ್ತಿ ಮತ್ತು ಉಣ್ಣೆ ಕೈಮಗ್ಗ ಉತ್ಪಾದನೆಗಳ ಅಭಿವೃದ್ಧಿಗಾಗಿ ಕೈಮಗ್ಗ ನೇಯ್ಗೆ ವೃತ್ತಿಯಲ್ಲಿ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ, ಉತ್ಕøಷ್ಟತೆಯ ಉತ್ಪನ್ನ ತಯಾರಿಸಿದ ಕೈಮಗ್ಗ ನೇಕಾರರಿಗೆ 2024-25ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದೇ ಮೇ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹರು ಕೈಮಗ್ಗ ಉತ್ಪಾದನೆಗಳ ಅಭಿವೃದ್ಧಿಗಾಗಿ ಕೈಮಗ್ಗ ನೇಯ್ಗೆಯ ಅಸಾಧಾರಣ ಕೌಶಲ್ಯದಲ್ಲಿ ಸುಮಾರು ಕನಿಷ್ಠ 30 ವರ್ಷ ಮೇಲ್ಪಟ್ಟವರು ಮತ್ತು ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು. ಆಸಕ್ತರು ಸೀರೆ, ಉಣ್ಣೆ ಕಂಬಳಿ ಉತ್ಪನ್ನದ ಮಾದರಿ ಬಣ್ಣದ ಛಾಯಾಚಿತ್ರ ಹಾಗೂ ವಿವಿಧ ಹಂತದ ವಿಡಿಯೋದೊಂದಿಗೆ ಅರ್ಜಿಯನ್ನು ಮೇ.31 ರೊಳಗೆ ಉಪನಿರ್ದೇಶಕರು, ಕೈ ಮಗ್ಗ ಮತ್ತು ಜವಳಿ ಇಲಾಖೆ, ಚಿತ್ರದುರ್ಗ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08194-221426 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.