i
ಭಾರೀ ಬಿರುಗಾಳಿ ಮಳೆಗೆ ಬಿದ್ದ ಮರ, ತೆರವುಗೊಳಿಸದ ಅಧಿಕಾರಿಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜೆ.ಸಿ.ಆರ್ ನಾಲ್ಕನೆ ಕ್ರಾಸ್ನಲ್ಲಿ ಬುಧವಾರ ಸಂಜೆ ಮರದ ದೊಡ್ಡ ಕೊಂಬೆಯೊಂದು ಮುರಿದು ಬಿದ್ದಿದ್ದು, ಗುರುವಾರದವರೆಗೂ ಅಲ್ಲಿಯೇ ಇತ್ತು ಯಾರು ತೆವುಗೊಳಿಸಿರಲಿಲ್ಲ.ಜಿ ಸೆವೆನ್ ಮಾರ್ಟ್ ಪಕ್ಕದ ರಸ್ತೆಯಲ್ಲಿರುವ ಮರಳುಸಿದ್ದೇಶ್ವರ ಮನೆಯ ಮುಂಭಾಗದಲ್ಲಿರುವ ಬೃಹದಾಕಾರವಾದ ಮರದ ಕೊಂಬೆ ಗಾಳಿಗೆ ಮುರಿದು ಬಿದ್ದ ಸಂದರ್ಭದಲ್ಲಿ ಅಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಕ್ಕಪಕ್ಕದವರು ನಗರಸಭೆಯವರಿಗೆ ಮಾಹಿತಿ ನೀಡಿದ್ದರೂ ತೆರವುಗೊಳಿಸುವ ಕೆಲಸವಾಗಿಲ್ಲ. ದ್ವಿಚಕ್ರ ವಾಹನೊಂದು ಬಿಟ್ಟರೆ ಬೇರೆ ಯಾವ ವಾಹನವೂ ಸಂಚರಿಸಲು ಜಾಗವಿಲ್ಲ. ದಿನವಿಡಿ ರಸ್ತೆ ಬಂದ್ ಆಗಿತ್ತು. ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಸಂಕಷ್ಟ ತೋಡಿಕೊಂಡರು.