![](https://www.chandravallinews.com/wp-content/uploads/2024/05/Smg-Sp-mitun-1-2.jpeg)
i
1.5 ಲಕ್ಷ ರೂ. ಮೌಲ್ಯದ ನೀರಿನ ಪೈಪ್ ವಶ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನೀರಿನ ಪೈಪ್ಲೈನ್ಕೆಲಸಕ್ಕೆ ಬಳಸುತ್ತಿದ್ದ ಪೈಪ್ಗಳನ್ನು ಕಳವು ಮಾಡಿ ಲಕ್ಕಿನಕೊಪ್ಪದ ಜಮೀನು ಒಂದರ ಪಕ್ಕದ ಹಳ್ಳದಲ್ಲಿ ಮುಚ್ಚಿಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಪೈಪ್ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪವನ್, ಮಾಲತೇಶ, ರಮೇಶ, ವಸೀಂ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರು 1.50 ಲಕ್ಷ ರೂ. ಮೌಲ್ಯದ ನಾಲ್ಕು ಪೈಪ್ಗಳನ್ನು ಕಳವು ಮಾಡಿದ್ದರು. ಅದನ್ನು ಲಕ್ಕಿನಕೊಪ್ಪ ಸಮೀಪ ಮುಚ್ಚಿಡುತ್ತಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ದೊರೆತ್ತಿದ್ದು ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.