![](https://www.chandravallinews.com/wp-content/uploads/2024/05/CN-.jpg)
i
ಮೇ-19 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಾಡು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೋಟರಿ ಕ್ಲಬ್ ಚಿತ್ರದುರ್ಗ, ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಮೇ. ೧೯ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧-೩೦ ರವರೆಗೆ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಕೀಲು, ಮಂಡಿ, ಭುಜದ ನೋವು ತಪಾಸಣೆ ನಡೆಸಲಾಗುವುದು. ಮೂಳೆ ತೊಂದರೆ, ಕೀಲು ಮರುಜೋಡಣೆ, ಹಿಪ್ ಮರುಜೋಡಣೆ, ಬೆನ್ನು ಮೂಳೆ ರೋಗ, ಉಚಿತ ಆಸ್ಥಿ ರಂಧ್ರತೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು.
ಸ್ತ್ರೀ ರೋಗ ತಪಾಸಣೆ ಕೂಡ ಉಚಿತ ಆರೋಗ್ಯ ಶಿಬಿರದಲ್ಲಿರುತ್ತದೆ.
ಡಾ.ರವಿ ಹೆಚ್.ರಂಗಾರೆಡ್ಡಿ, ಡಾ.ಚೈತ್ರ ರವಿ ಇವರುಗಳು ಶಿಬಿರದಲ್ಲಿ ತಪಾಸಣೆ ನಡೆಸಲಿರುವರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಅಧ್ಯಕ್ಷ ರೊ.ಕನಕರಾಜ್, ಕಾರ್ಯದರ್ಶಿ ರೊ. ವಿಕ್ರಾಂತ್ ಜೈನ್ ಇವರುಗಳು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ: ೭೯೭೫೧೧೬೪೨೮, ೮೫೪೮೮೯೪೪೪೪ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.