![](https://www.chandravallinews.com/wp-content/uploads/2024/06/IMG_20240611_062313.jpg)
i
ಪೊಲೀಸರ ದಾಳಿ, 5 ಲಕ್ಷ ಮೌಲ್ಯದ ಪಟಾಕಿ ನಾಶ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ೨೦೨೩ರಲ್ಲಿ ಚಳ್ಳಕೆರೆ ನಗರದ ವಿವಿಧ ಪಟಾಕಿ ಅಂಗಡಿಗಳ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಮಾರಾಟವಾಗುತ್ತಿದ್ದ ಸುಮಾರು ೫ ಲಕ್ಷ ಮೌಲ್ಯದ ವಿವಿಧ ಕಂಪನಿಯ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸದರಿ ಪಟಾಕಿಗಳನ್ನು ಸೋಮವಾರ ನಗರದ ಹೊರವಲಯ ಸರ್ಕಾರಿ ಜಮೀನಿನಲ್ಲಿ ನಾಶಪಡಿಸಲಾಯಿತು.
.ಪೊಲೀಸ್ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಪಟಾಕಿ ಮಾರಾಟಗಾರರ ಬಳಿ ಯಾವುದೇ ಅದಿಕೃತ ಅನುಮತಿ ಇರಲಿಲ್ಲ. ಕೆಲವೊಂದು ಕಂಪನಿಗಳಿಂದ ಮಾತ್ರ ಅನುಮತಿ ಇದ್ದು ಅವುಗಳನ್ನು ಹೊರತು ಪಡಿಸಿ ಬೇರೆ ಎಲ್ಲಾ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಸರ್ಕಾರದ ಸೂಚನೆಯಂತೆ ಬೆಂಗಳೂರಿನ ಬಾಂಬ್ ನಿಗ್ರಹದಳ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ನಾಶಪಡಿಸಲಾಗಿದೆ. ಆಳಾವಾದ ಗುಂಡಿಯನ್ನು ಜೆಸಿಬಿ ಸಹಾಯದಿಂದ ತೋಡಿ ಅದಲ್ಲಿ ಎಲ್ಲಾ ಪಟಾಕಿಗಳನ್ನು ಜೋಡಿಸಿ ಸಿಡಿದರೂ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ ನಂತರ ಗುಂಡಿಯಲ್ಲಿನ ಪಟಾಕಿಗಳಿಗೆ ಬೆಂಕಿಹಚ್ಚಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಠಾಣಾ ಇನ್ಸ್ಪೆಕ್ಟರ್ ಕೆ.ಕುಮಾರ್ ಗುಪ್ತಚಾರ ದಳದ ಇನ್ಸ್ಪೆಕ್ಟರ್ ಯಮುನಪ್ಪ, ಪಿಎಸ್ಐಗಳಾದ ಕೆ.ಸತೀಶ್ನಾಯ್ಕ, ಧರೆಪ್ಪಬಾಳಪ್ಪದೊಡ್ಡಮನಿ, ಗುಪ್ತಚಾರ ದಳದ ಪಿಎಸ್ಐ ತಿಪ್ಪೇಸ್ವಾಮಿ, ಎಎಸ್ಐ ಕೃಷ್ಣಪ್ಪ, ಮುಖ್ಯಪೇದೆ ಚಂದ್ರಶೇಖರ್ನಾಯ್ಕ, ವಿಶಾಲ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.