![](https://www.chandravallinews.com/wp-content/uploads/2024/06/IMG_20240611_062715-1024x724.jpg)
i
ಮನೆ ಬಾಗಿಲು ಮುರಿದು 1.60 ಲಕ್ಷ ನಗದು ಚಿನ್ನಾಭರಣ ದೋಚಿದ ಕಳ್ಳರು
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮನೆಯ ಬಾಗಿಲುಮುರಿದ ಕಳ್ಳರು 1.60 ಲಕ್ಷ ನಗದು, ಚಿನ್ನಾಭರಣ ದೋಚಿರುವ ಘಟನೆ ನಗರದ ಕುರುಬರಹಳ್ಳಿ ಎರಡನೇ ಹಂತದ 2ನೇ ಕ್ರಾಸ್ನಲ್ಲಿನಡೆದಿದೆ.
ಇಲ್ಲಿನ ಬಿ.ಎನ್.ನಂಜುಂಡಪ್ಪ ಅವರ ಮನೆಯಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದೆ. ನಂಜುಂಡಪ್ಪ ಅವರು ತನ್ನ ಮಗನ ಮನೆಯ ಗೃಹಪ್ರವೇಶಕ್ಕೆಂದು ಚಂದ್ರಮೌಳೇಶ್ವರ ಬಡಾವಣೆಗೆ ತೆರಳಿದ್ದರು. ಗೃಹಪ್ರವೇಶ ಮುಗಿಸಿಕೊಂಡು ಭಾನುವಾರ ರಾತ್ರಿ ಮನೆಗೆ ಬಂದಾಗ ಬಾಗಿಲು ಮುರಿದು ಬೀರುವಿನಲ್ಲಿದ್ದ 1.60 ಲಕ್ಷ ರೂ. ನಗದು, ಮಗುವಿನನಾಲ್ಕು ಚಿನ್ನದ ಉಂಗುರಗಳು ಎರಡುಜೊತೆ ಓಲೆಯನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮನೆಯ ಮೇಲೆಅಳವಡಿಸಿದ್ದ ಗ್ರಿಲ್ ಬಾಗಿಲು ತೆಗೆದು ಒಳ ಬಂದಿರುವ ಕಳ್ಳರು, ಉರುಯುತ್ತಿದ್ದ ಬಲ್ಬ್ ಹೊಡೆದು ಹಾಕಿ, ಆರೆ ಕೋಲಿನಿಂದ ಬಾಗಿಲುಮೀಟಿ ಒಳ ಹೋಗಿದ್ದಾರೆ. ಜೊತೆಗೆ ಮಹಡಿಯ ಮೇಲಿದ್ದ ರೂಮಿನ ಬಾಗಿಲು ಮೀಟಿದ್ದಾರೆ. ಭಾನುವಾರ ರಾತ್ರಿಯೇ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಮಾಲೀಕರಾದ ನಂಜುಂಡಪ್ಪ ಹಾಗೂ ಅವರ ಮಗ ಪ್ರಭಾಕರ್ ತಿಳಿಸಿದರು.
ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗು ಸಿಬ್ಬಂದಿ ಪರಿಶೀಲಿಸಿದರು. ಶ್ವಾನದಳ ಕೂಡ ಪರಿಶೀಲನೆ ನಡೆಸಿತು. ನಂಜುಂಡಪ್ಪಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.