i
ದಾಖಲೆ ಇಲ್ಲದೆ 20.35 ಲಕ್ಷ ರೂ.ಜಪ್ತಿ ಮಾಡಿದ ಚುನಾವಣಾಧಿಕಾರಿಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾರ್ಚ್-26ರಂದು ಮಂಗಳವಾರ ಮಧ್ಯಾಹ್ನ 12.30 ರ ಸಮಯದಲ್ಲಿ ಹೊಸಪೇಟೆ ಯಿಂದ ಚಿತ್ರದುರ್ಗ ನಗರಕ್ಕೆ ಬರುವ ಮಾರ್ಗದ ಪಿಳ್ಳೆಕೇರನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಕಾರ್ ನಲ್ಲಿ ಸಾಗಿಸುತಿದ್ದ 20,35,000 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಯಿತು.
ಪಿಳ್ಳೆಕರೆನಹಳ್ಳಿ ಚೆಕ್ ಪೋಸ್ಟ್ ಎಸ್.ಎಸ್.ಟಿ ಹಾಗೂ ಎಫ್.ಎಸ್.ಟಿ ತಂಡದವರು, ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ಗ್ರಾಮಾಂತರ ಪೊಲೀಸ್ಠಾಣೆ ಪೊಲೀಸ್ನಿರೀಕ್ಷಕ ಸುನೀಲ್ಕುಮಾರ್ ಇವರು ಉಪಸ್ಥಿತರಿದ್ದರು.