ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ 2025-26ನೇ ಸಾಲಿನ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸೆಪ್ಟೆಂಬರ್ 20, 2026ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಕರೆಯಲಾಗಿದೆ.
ಬಸವೇಶ್ವರನಗರದ ಕಮಲಾನಗರದಲ್ಲಿರುವ 'ಕರ್ನಾಟಕ ಇಂಜಿನಿಯರ್ಸ್ ಅಕಾಡಮಿ' (ಸಿ.ಎ. ಸೈಟ್ ನಂ.1, 8ನೇ ಮುಖ್ಯರಸ್ತೆ, 2ನೇ ಕ್ರಾಸ್) ಆವರಣದಲ್ಲಿ ಸಂಘದ ಅಧ್ಯಕ್ಷರಾದ ಎಸ್.ಕೆ. ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.
ಸಭೆಯ ಕಾರ್ಯಸೂಚಿಗಳು:
2025-26ನೇ ಸಾಲಿನ ಆಡಿಟ್ ಮಾಡಿಸಿದ ಲೆಕ್ಕಪತ್ರಗಳು ಹಾಗೂ 2024-25ರ ಆಡಳಿತ ಮಂಡಳಿ ವರದಿಯ ಪರಿಶೀಲನೆ ಮತ್ತು ಅಂಗೀಕಾರ.
2026-27ನೇ ಸಾಲಿನ ಅಂದಾಜು ಆಯ-ವ್ಯಯ (ಬಜೆಟ್) ಮಂಜೂರಾತಿ.
23ನೇ ಸರ್ವ ಸದಸ್ಯರ ಸಭೆಯ ನಡಾವಳಿಗಳ ಸ್ಥಿರೀಕರಣ ಹಾಗೂ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ.
ಸದಸ್ಯರಿಂದ ಬಂದಿರುವ ಪ್ರಸ್ತಾವನೆಗಳು ಹಾಗೂ ಅಧ್ಯಕ್ಷರ ಅನುಮತಿಯೊಂದಿಗೆ ಇತರ ವಿಷಯಗಳ ಚರ್ಚೆ.
ವಿಶೇಷ ಸೂಚನೆಗಳು:
ಸಭೆಗೆ ಕೋರಂ ಇಲ್ಲದಿದ್ದರೆ ಅರ್ಧ ಗಂಟೆ ಮುಂದೂಡಿ ಸಭೆ ನಡೆಸಲಾಗುವುದು. ಚರ್ಚಿಸಬೇಕಾದ ವಿಷಯಗಳಿದ್ದಲ್ಲಿ ಸದಸ್ಯರು ಸಭೆಗೆ 7 ದಿನ ಮುಂಚಿತವಾಗಿ ಲಿಖಿತ ರೂಪದಲ್ಲಿ ಅಧ್ಯಕ್ಷರಿಗೆ ಅಥವಾ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು.
ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಯ ಪ್ರತಿಗಳನ್ನು ಸಭೆಗಿಂತ ಮುಂಚಿತವಾಗಿ ಪಡೆದುಕೊಳ್ಳಬಹುದು. ಸಭೆಯ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಸಂಘದ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯಲು ಎಲ್ಲಾ ಸದಸ್ಯ ಬಂಧುಗಳು ತಪ್ಪದೇ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಕಾರ್ಯದರ್ಶಿ ಜಿ.ಹೆಚ್. ನಾಗಹನುಮಯ್ಯ (ಕೆ.ಎ.ಎಸ್) ಕೋರಿದ್ದಾರೆ. (ಸಂಪರ್ಕ ಸಂಖ್ಯೆಗಳು: 9449556844, 8073721238, 7349573825, 9844526677).




