Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಪ್ರಕರಣ ಮುಚ್ಚಿಹಾಕುವ ಯತ್ನ:ಶ್ರೀರಾಮುಲು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೃತರ ಮನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಹಾಗಾದರೆ, ಈ ಪ್ರಕರಣವನ್ನು ಎಸ್ಐಟಿಗೆ ಕೊಡ್ತೀರಾ? ಪ್ರಕರಣದ ಮೂಲ ಬುಡವನ್ನು ಹುಡುಕುವ‌ಕೆಲಸವಾಗ್ತಿಲ್ಲ. ಇದಕ್ಕಲ್ಲ ಕಾರಣ ಭರತ್ ರೆಡ್ಡಿ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.


ಮೊನ್ನೆ ಸಿಎಂ ಏರ್ಪೋರ್ಟ್​ಗೆ ಬಂದಾಗ ಭರತ್ ರೆಡ್ಡಿ ಹತ್ತಿರ ಮಾತನಾಡಿದ್ದಾರೆ. ಭರತ್ ರೆಡ್ಡಿ ಪ್ರಕರಣದ A1 ಆರೋಪಿಯಾಗಿದ್ದು ಅವರ ಜೊತೆಗೆ ಸಿಎಂ ಮಾತನಾಡ್ತಾರೆ. ಡಿಕೆ ಶಿವಕುಮಾರ್ ಕೂಡ ಭರತ್ ರೆಡ್ಡಿ ಬೆಂಬಲಕ್ಕೆ ನಿಂತಿದ್ದಾರೆ ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಕೂಡ ನಡೆಸಬಹುದು ಎಂಬ ಅನುಮಾನ ಮೂಡುತ್ತಿದೆ ಎಂದು ಶ್ರೀರಾಮುಲು ಕಿಡಿಕಾರಿದರು.


ಮೃತ ರಾಜಶೇಖರನ ಕುಟುಂಬಕ್ಕೆ ಯಾವ ನ್ಯಾಯ ಕೊಡ್ತಾರೆ ಅನ್ನೋ ಬಗ್ಗೆ ಕಾದು ನೋಡ್ತೇನೆ. ಯಾವುದನ್ನು ಸಮರ್ಥನೆ ಮಾಡಿಕೊಳ್ಳಲ್ಲ. ಭರತ್ ರೆಡ್ಡಿ ಕಡೆಯವರು ಸತ್ಯವಂತರೇ? ಅವರು ಜನಾರ್ದನ ರೆಡ್ಡಿ ಮನೆಗೆ ಸಾವಿರಾರು ಗೂಂಡಾಗಳನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದಾಗ ನಾವು ಸುಮ್ಮನೆ ಕೂರಬೇಕೇ? ಅವರು ಹೊಡೆದ್ರೇ ನಾವು ಕೈಕೊಟ್ಟಿ ಕುಳಿತುಕೊಳ್ಳಬೇಕೇ? ದಾಳಿಯಾದಾಗ ಪ್ರತಿದಾಳಿಯಾಗಿದೆ.

ನೂಕು ನುಗ್ಗಲು ಆದಾಗ ಎರಡು ಕಡೆ ದಾಳಿಯಾಗಿರಬಹುದು. ಆವೇಶದಲ್ಲಿ ಕಟ್ಟಿಗೆ, ಕಾರದ ಪುಡಿ ತಂದಿರಬಹುದು. ಜನಾರ್ದನ ರೆಡ್ಡಿ ಪಕ್ಕದಲ್ಲೇ ಗುಂಡು ಹಾರಿದೆ. ಜನಾರ್ದನ ರೆಡ್ಡಿ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಕಣ್ಣೆದುರು ನಾನು ನೋಡಿದಾಗ ಗೋಲಿ ಹೊಡೆದ್ರು.

ಶ್ರೀರಾಮುಲುಗೆ ಗೋಲಿ ತಗುಲಿದೆ ಎಂದು ಜನರು ಓಡೋಡಿ ಬಂದ್ರು. ಇದು ಸಡನ್ ಅಗಿ ನಡೆದ ಘಟನೆ. ಇಬ್ಬರ ಪಾತ್ರ ಇರೋದಕ್ಕೆ ಎರೆಡು ಕಡೆ ಬಂಧನವಾಗಿದೆ. ನಾನು ಬೇಲ್ ಕೂಡ ತೆಗೆದುಕೊಳ್ಳಲ್ಲ. ತಪ್ಪಿದ್ದರೆ ನನ್ನನ್ನು ಬಂಧಿಸಲಿ ಎಂದು ರಾಮುಲು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!