E-PAPER
18 Nov 2026, 12:29:55 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಹಿರಿಯೂರು ಉಪಚುನಾವಣೆ: ಬಿಜೆಪಿಯ ದೆಹಲಿ ಅಂಗಳಕ್ಕೆ ಮೂವರ ಹೆಸರು ರವಾನೆ?

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
 ಹಿರಿಯೂರು ವಿಧಾನಸಭಾ ಉಪಚುನಾವಣೆಗೆ ಮುಹೂರ್ತ ಸನ್ನಿಹಿತವಾಗುತ್ತಿದ್ದಂತೆ
, ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಟಿಕೆಟ್ ಹಂಚಿಕೆಯ ಕಗ್ಗಂಟು ತೀವ್ರಗೊಂಡಿದೆ. ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೂ ಗೆಲುವಿನ ಭರವಸೆ ಇರುವುದರಿಂದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ದೋಸ್ತಿಗಳ ನಡುವೆ ಅಂತರ ಹೆಚ್ಚಾಗುತ್ತಿದೆ.  

 ಬಿಜೆಪಿಯಿಂದ ಮೂವರ ಹೆಸರು ಶಿಫಾರಸು?ಇತ್ತೀಚೆಗೆ ರಾಜ್ಯ ಪ್ರವಾಸಕ್ಕೆ ಬಂದಿದ್ದ ನೂತನ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಅವರ ಮುಂದೆ, ಹಿರಿಯೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ದೆಹಲಿ ವರಿಷ್ಠರಿಗೆ ರವಾನಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.  

ರೇಸ್‌ನಲ್ಲಿರುವ ಪ್ರಮುಖರು ಯಾರು?ರಾಜಣ್ಣ: ಕರ್ನಾಟಕ ಕಾಡುಗೊಲ್ಲರ ಸಂಘದ ಅಧ್ಯಕ್ಷರು ಹಾಗೂ ಮಾಜಿ ಬಿಬಿಎಂಪಿ ಕಾರ್ಪೊರೇಟರ್. ಮೇ 2026ರಲ್ಲಿ ಬಿಜೆಪಿ ಸೇರಿದ ಇವರಿಗೆ ಕ್ಷೇತ್ರದ ನಿರ್ಣಾಯಕ ಕಾಡುಗೊಲ್ಲ ಮತಗಳ ಬಲವಿದೆ.  

 ಎ. ಮುರಳಿ: ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೂ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದಾರೆ.   ಎನ್.ಆರ್. ಲಕ್ಷ್ಮೀಕಾಂತ್: ಹಿರಿಯ ನಾಯಕ ಹಾಗೂ ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ಇವರು, 2008ರ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ. 

 ಕುಮಾರಸ್ವಾಮಿ ನಿಲುವಿನತ್ತ ಎಲ್ಲರ ಚಿತ್ತ:2008ರಿಂದ ಈವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿ (ದಿವಂಗತ ಡಿ. ಸುಧಾಕರ್ 3 ಬಾರಿ, ಪೂರ್ಣಿಮಾ 1 ಬಾರಿ ಗೆಲುವು) ಕ್ಷೇತ್ರವು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. 2013ರಲ್ಲಿ ಕೇವಲ 1,205 ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್, ಹಿರಿಯೂರಿನಲ್ಲಿ ಗಟ್ಟಿ ಮತಬ್ಯಾಂಕ್ ಹೊಂದಿದೆ.

 "ಸ್ಥಳೀಯ ಜನರ ಅಭಿಪ್ರಾಯ ಜೆಡಿಎಸ್ ಸ್ಪರ್ಧೆಯ ಪರವಾಗಿದೆ, ಬಿಜೆಪಿ ವಾಸ್ತವ ಅರಿಯಲಿ" ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಸಂದೇಶ ರವಾನಿಸಿದ್ದಾರೆ.   ಹೀಗಾಗಿ, ರಾಜ್ಯ ಬಿಜೆಪಿ ಕಳುಹಿಸಿರುವ ಪಟ್ಟಿಗೆ ಅಮಿತ್ ಶಾ ಒಪ್ಪಿಗೆ ನೀಡುತ್ತಾರಾ ಅಥವಾ ಮೈತ್ರಿ ಧರ್ಮಕ್ಕಾಗಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುತ್ತಾರಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ. 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದವಲ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಹೂ ಕೋಸು ನಾರು ಪೂರೈಕೆ:ಬೆಳೆ ನಾಶವಾಗಿ ಕಂಗಾಲಾದ ರೈತಬಸವಣ್ಣನವರ ಮೇಲೆ ಕಳಂಕದ ಮಾತು ಸಲ್ಲದು; ಅವರ ವಚನಗಳೇ ಆರೋಪಗಳಿಗೆ ಕನ್ನಡಿ!ಬಿಲ್ಕಿಸ್ ಬಾನೋ ಪ್ರಕರಣ: 17 ವರ್ಷ ಜೈಲುವಾಸ ಪೂರೈಸಿದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು'ಪ್ರೆಸ್' ಸ್ಟಿಕ್ಕರ್ ಬಳಸಿ ಶವ ಸಾಗಾಟ: ರಾಜಾಜಿನಗರ ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿ ಕರಾಳ ಮುಖ ಬಯಲು!ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಬೇಡ: ಯುರೋಪ್ ರಾಜಕಾರಣಿ ಹೇಳಿಕೆಗೆ ಇಟಲಿ ಸಂಸದೆ ಡೆಬೊರಾ ಬೆರ್ಗಾಮಿನಿ ತಿರುಗೇಟುಯುಪಿ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: 181 ಸೀಟುಗಳ ಪಟ್ಟಿ ಸಲ್ಲಿಕೆ, ಎಸ್‌ಪಿ ಜೊತೆ ಮಹತ್ವದ ಸಭೆವಿಧಾನ ಪರಿಷತ್‌ನ ನಾಲ್ವರು ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರನಿಗಮ-ಮಂಡಳಿ ನೇಮಕಾತಿ: ಕಾಂಗ್ರೆಸ್‌ನಲ್ಲಿ ಭಿನ್ನಮತ, ಆರ್‌ಎಸ್‌ಎಸ್ ಕಾರ್ಯಕರ್ತರ ಸೇರ್ಪಡೆಗೆ ತೀವ್ರ ಆಕ್ಷೇಪಹಿರಿಯೂರು ಉಪಚುನಾವಣೆ-ಎನ್‌ಡಿಎ ಮೈತ್ರಿಯಲ್ಲಿ ಟಿಕೆಟ್ ಕಗ್ಗಂಟು!ಹಿರಿಯೂರು ಉಪಚುನಾವಣೆ: ಬಿಜೆಪಿಯ ದೆಹಲಿ ಅಂಗಳಕ್ಕೆ ಮೂವರ ಹೆಸರು ರವಾನೆ?