ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಬೆಂಗಳೂರಿನ ಆಕೃತಿ ಪುಸ್ತಕ ಸಹಯೋಗದಲ್ಲಿ ಇದೇ ನವೆಂಬರ್ 15ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶ್ರೀನಿವಾಸರಾಜು ದೊಡ್ಡೇರಿ ಅವರ ಅನುವಾದಿತ ಕೃತಿ ‘ಬಾಬಾಸಾಹೇಬ್’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಕಾಶ್ ಸಿಂಗ್ ರಾಥೋಡ್ ಅವರ ‘ಬೀಕಮಿಂಗ್ ಬಾಬಾಸಾಹೇಬ್’ ಕೃತಿಯ ಕನ್ನಡ ಅನುವಾದ ಇದಾಗಿದೆ. ಕಾರ್ಯಕ್ರಮದಲ್ಲಿ ದಲಿತ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರು ಕೃತಿ ಬಿಡುಗಡೆ ಮಾಡುವರು. ಇಂಗ್ಲಿಷ್ ಪ್ರಾಧ್ಯಾಪಕ ಬಿ.ಎಲ್. ರಾಜು ಕೃತಿ ಕುರಿತು ಮಾತನಾಡಲಿದ್ದಾರೆ. ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಅಂಬೇಡ್ಕರ್ ಬುದ್ಧ ಮಹಾವೇದಿಕೆಯ ಅಧ್ಯಕ್ಷ ಪಿ. ದ್ಯಾಮಯ್ಯ ಮೈತ್ರಿ, ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜಿಲ್ಲಾ ಸಮನ್ವಯಕಾರರಾದ ಡಾ.ಆರ್. ಮಮತಾ ಹಾಗೂ ಮಾತಾ ರಮಾಬಾಯಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಡಿ. ವಿಜಯಶ್ರೀ ಭಾಗವಹಿಸುವರು. ಅನುವಾದಕ ಶ್ರೀನಿವಾಸರಾಜು ದೊಡ್ಡೇರಿ, ಪ್ರಕಾಶಕ ಆಕೃತಿ ಗುರುಪ್ರಸಾದ್ ಹಾಗೂ ವಿನ್ಯಾಸಕ ಎಸ್. ವಿಷ್ಣುಕುಮಾರ್ ಉಪಸ್ಥಿತರಿರುವರು.
ಶಿವಶಂಕರ್ ಸೀಗೇಹಟ್ಟಿ ಅವರಿಂದ ಅಂಬೇಡ್ಕರ್ ಗೀತೆಗಳ ಗಾಯನ, ಆಕೃತಿ ಪುಸ್ತಕ ವತಿಯಿಂದ ಪುಸ್ತಕ ಪ್ರದರ್ಶನ ಇರಲಿದೆ ಪ್ರಕಟಣೆ ತಿಳಿಸಿದೆ.




