ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಡಾ.ಸೈಂಟಿಸ್ಟ್ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ, ಹೊಸದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿರುವ ತಿಪ್ಪೇಸ್ವಾಮಿ ಅವರಿಗೆ ಬಿಇಒ ಕಚೇರಿಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ಶಾಲೆಯ ಅಧ್ಯಕ್ಷ ಡಾ.ಬಿ. ಮಹಂತೇಶ್ ಹಾಗೂ ಕಾರ್ಯದರ್ಶಿ ಡಾ.ರವಿಪ್ರಸಾದ್ ಸಜ್ಜನ್ ಎಂ. ಅವರು ನೂತನ ಅಧಿಕಾರಿಗೆ ಹಾರ ಹಾಕಿ, ಶಲ್ಯ ಹೊದಿಸಿ, ಫಲ-ತಾಂಬೂಲ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಇಒ ತಿಪ್ಪೇಸ್ವಾಮಿ, ಡಾ.ಮಹಂತೇಶ್ ಮತ್ತು ಡಾ. ರವಿಪ್ರಸಾದ್ ಸಜ್ಜನ್ ಅವರ ಶೈಕ್ಷಣಿಕ ಸೇವೆ ಹಾಗೂ ಸಾಧನೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಕೆ.ಪಿ. ಪುಟ್ಟಸ್ವಾಮಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಚ್.ಆರ್. ಮಂಜುನಾಥ್, ಪ್ರಥಮ ದರ್ಜೆ ಸಹಾಯಕ ನಟರಾಜ್, ನಿರ್ಮಲ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಶಿವಕುಮಾರ್ ಉಪಸ್ಥಿತರಿದ್ದರು.




