Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣ ಪರಿಕರ ನೀಡುವ ಮೂಲಕ ಜನ್ಮದಿನಾಚರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿಸವನಹಳ್ಳಿ ಗ್ರಾಮದಲ್ಲಿ  ಉದ್ಬವ ಮೂರ್ತಿ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನದಲ್ಲಿ ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಕುಟುಂಬದ  ಕೇಶವ ಮತ್ತು ಸುಶ್ಮ ದಂಪತಿಯ ಪುತ್ರಿ ಅಧ್ವಿತಾ ಅವರ ಜನ್ಮದಿನವನ್ನು ಆಚರಿಸಲಾಯಿತು.

ಜನ್ಮದಿನದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಉದ್ಭವ ಮೂರ್ತಿ ಶ್ರೀ ತಿಮ್ಮರಾಯ ಸ್ವಾಮಿ ಹಾಗೂ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕುಟುಂಬದವರು ಮಗುವಿನ ಸುಖ, ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಬಿಸವನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ  ಅಗತ್ಯವಾದ ಶಿಕ್ಷಣ ಪರಿಕರಗಳನ್ನು ವಿತರಿಸಲಾಯಿತು.

ನಂತರ ದೇವರಿಗೆ ಪೂಜಾ ಕೈಂಕರ್ಯಗಳು ನಂತರ ಅಲ್ಲದೆ, ಶಾಲಾ ಮಕ್ಕಳಿಗೆ  ಸಿಹಿ ಭೋಜನವನ್ನು ನೀಡಲಾಯಿತು. ಶಿಕ್ಷಣ ಮತ್ತು ಸೇವೆಗೆ ಪ್ರಾಮುಖ್ಯತೆ ನೀಡುವ ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಭಾಗ್ಯಮ್ಮ ಅವರ ಪುತ್ರ ತಿಮ್ಮರಾಯ( ವೇಣು ಗೋಪಾಲ್)  ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ ಎಂ., ರಾಮಯ್ಯ, ಪರಶುರಾಮ ಬಿ.ಕೆ., ಯಲ್ಲಪ್ಪ, ಆಂಜಿನಪ್ಪ (ಬೆಟ್ಟ) ಹಾಗೂ ರವಿಕುಮಾರ್ ಎಂ. ಸೇರಿದಂತೆ ಗ್ರಾಮದ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದು, ಅಧ್ವಿತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST