Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ತುಮಕೂರು - ಎಲೆಕ್ಟ್ರಾನಿಕ್‌ಸಿಟಿ ನಡುವೆ ಬಿಎಂಟಿಸಿ 'ವಜ್ರ' ಎಕ್ಸ್‌ಪ್ರೆಸ್ ಬಸ್ ಸಂಚಾರ ಆರಂಭ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರು ಮತ್ತು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಡುವೆ ನಿತ್ಯ ಸಂಚರಿಸುವ ಸಾರ್ವಜನಿಕರು ಹಾಗೂ ಐಟಿ ಉದ್ಯೋಗಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭರ್ಜರಿ ಉಡುಗೊರೆ ನೀಡಿದೆ.

 

ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ಇಲ್ಲದೆ, ಅತ್ಯಂತ ವೇಗವಾಗಿ ಮತ್ತು ಆರಾಮದಾಯಕವಾಗಿ ತಲುಪಲು ಬಿಎಂಟಿಸಿಯು ಜುಲೈ 6 ರಂದು ಸೋಮವಾರದಿಂದ ಹೊಸ 'ಲಿಮಿಟೆಡ್ ಸ್ಟಾಪ್ ಎಕ್ಸ್‌ಪ್ರೆಸ್' ಬಸ್ ಸೇವೆಯನ್ನು ಅಧಿಕೃತವಾಗಿ ಆರಂಭಿಸುತ್ತಿದೆ.

 

ನೈಸ್ ರಸ್ತೆಯ ಮೂಲಕ ಸಂಚರಿಸುವ ಈ ಬಸ್‌ಗಳು ಬೆಂಗಳೂರಿನ ಗದ್ದಲದ ಟ್ರಾಫಿಕ್‌ಗೆ ಸಿಲುಕದೆ ನೇರವಾಗಿ ತುಮಕೂರನ್ನು ತಲುಪಲಿವೆ ಎಂದು ಬಿಎಂಟಿಸಿ ತಿಳಿಸಿದೆ.

 

ಬಸ್ ಸೇವೆಯ ಪ್ರಮುಖ ವಿವರಗಳು:
1Aಬಸ್‌ಗಳ ಮಾದರಿ: ಎರಡು ಸುಸಜ್ಜಿತ ಹವಾನಿಯಂತ್ರಿತ ವಜ್ರ ಬಸ್‌ಗಳು. ಟಿಕೆಟ್ ದರ: ಒಬ್ಬ ಪ್ರಯಾಣಿಕರಿಗೆ 200 ರೂ. (ಜಿಎಸ್‌ಟಿ ಮತ್ತು ನೈಸ್ ರಸ್ತೆ ಟೋಲ್ ಶುಲ್ಕಗಳು ಒಳಗೊಂಡಿವೆ). ಬಸ್ ಸಂಚಾರ ಮಾರ್ಗ:ಈ ಎಕ್ಸ್‌ಪ್ರೆಸ್ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ನಿಂದ ಆರಂಭವಾಗಿ ನೇರವಾಗಿ ನೈಸ್ ರಸ್ತೆ ಪ್ರವೇಶಿಸಲಿವೆ.

 

ರೂಟ್ ಮ್ಯಾಪ್: ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ಬನ್ನೇರುಘಟ್ಟ ನೈಸ್ ರಸ್ತೆ, ಕನಕಪುರ ನೈಸ್ ರಸ್ತೆ, ಮೈಸೂರು ನೈಸ್ ರಸ್ತೆ, ಮಾದಾವರ ಮಾರ್ಗವಾಗಿ ತುಮಕೂರು ತಲುಪಲಿವೆ.
ಬಸ್ ವೇಳಾಪಟ್ಟಿ
: ಸದ್ಯ ಆರಂಭಿಕ ಹಂತದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇರಿ ಒಟ್ಟು 2 ಟ್ರಿಪ್‌ಗಳಲ್ಲಿ ಈ ಬಸ್‌ಗಳು ಸಂಚರಿಸಲಿವೆ.

 

ಬೆಳಗ್ಗಿನ ಟ್ರಿಪ್: ತುಮಕೂರಿನಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ಗೆ ಬೆಳಗ್ಗೆ 7:45ಕ್ಕೆ ಹೊರಡಲಿದೆ.
ಸಂಜೆಯ ಟ್ರಿಪ್: ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ತುಮಕೂರಿಗೆ ಸಂಜೆ
5:45ಕ್ಕೆ ಹೊರಡಲಿದೆ.
ದೈನಂದಿನ ಪ್ರಯಾಣಿಕರ ಸಮಯ ಉಳಿಸುವ ಹಾಗೂ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಬಿಎಂಟಿಸಿ ಇಟ್ಟಿರುವ ಈ ಹೆಜ್ಜೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆಗೆ ಪಾತ್ರವಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.