Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನಿಮ್ಮ ವಿಶೇಷ ದಿನಗಳನ್ನು ಅನ್ನದಾಸೋಹದೊಂದಿಗೆ ಆಚರಿಸಿ - ಎಚ್. ಶಿವಕುಮಾರ್ 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಹಸಿದವರಿಗೆ ಆಹಾರ ವಿತರಣೆ ಹಾಗೂ ಕಡುಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹಾಗೂ ಪ್ರಜಾ ವಿಮೋಚನಾ ಚಳುವಳಿ ತಾಲ್ಲೂಕು ಅಧ್ಯಕ್ಷರಾದ ಎಚ್. ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ 1878 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಡು ಬಡವರಿಗೆ ನಿರಾಶ್ರಿತರಿಗೆ ಆಹಾರ ವಿತರಣೆ ಮತ್ತು ಬಟ್ಟೆ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷವೂ  ಸಾರ್ವಜನಿಕರಿಗೆ ಸೇವೆ ಮಾಡುವ ಮೂಲಕ  ನನ್ನ ಹುಟ್ಟು ಹಬ್ಬವನ್ನು  ಆಚರಣೆ ಮಾಡಲಾಗುತ್ತಿದೆ , ಅಂತೆಯೇ ಇಂದು ವಿಶೇಷವಾಗಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ  ನನ್ನ ಹುಟ್ಟುಹಬ್ಬವನ್ನು  ಕಡುಬಡವರಿಗೆ ಆಹಾರ ವಿತರಣೆ ಮತ್ತು ಬಟ್ಟೆ ವಿತರಣೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

 ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಇಂತಹ  ಜನರ ಮಧ್ಯೆ  ಆಹಾರ ವಿತರಣೆ ಮಾಡುವ ಮೂಲಕ  ಸಂಭ್ರಮಿಸುವುದು ಅತ್ಯಂತ ಅರ್ಥಪೂರ್ಣ ಎಂಬುದು ನನ್ನ ಭಾವನೆ, ಸಮಾಜದಲ್ಲಿ ದುಂದು ವೆಚ್ಚ ಮಾಡಿ  ಹುಟ್ಟುಹಬ್ಬವನ್ನು ಶುಭ ಸಮಾರಂಭಗಳನ್ನು ಆಚರಿಸುವ ಸಮುದಾಯಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇನೆ , ತಮ್ಮ ಸಂಭ್ರಮಾಚರಣೆ ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಮೂಲಕ ಆಚರಣೆಯಾಗಲಿ ಎಂದರು.

 ಸಮಾಜ ಸೇವಕರದ ರಫೀಕ್  ಪಾಷಾ ಮಾತನಾಡಿ ಆತ್ಮೀಯ ಗೆಳೆಯರು ಯುವ ಮುಖಂಡರಾದ ಶಿವುರವರು ತಮ್ಮ ಹುಟ್ಟುಹಬ್ಬವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಹಾಗೂ ಕಡುಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ, ದೇಶ ಮುಂದುವರೆದಿದೆ ಎಂದು ಹೇಳುವ ರಾಜಕಾರಣಿಗಳು ಇಂತಹ ಸ್ಲಂ ಗಳಿಗೆ ಬಂದು ಭೇಟಿ ಮಾಡಬೇಕು, ಬಡವರ ಜೀವನ, ಕಷ್ಟ ಕುರಿತಂತೆ ಅರಿವು ಪಡೆಯಬೇಕು , ಸರ್ಕಾರದ ಯೋಜನೆಗಳು ಶ್ರೀಮಂತರ ಜೇಬು ತುಂಬಿಸುವುದು ಬಿಟ್ಟು, ಬಡವರ ಹೊಟ್ಟೆ ತುಂಬಿಸಲಿ ಎಂದರು.

ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ  ರಾಜ್ಯಕಾರ್ಯಧ್ಯಕ್ಷರು ಹಾಗೂ ಪ್ರಜಾ ವಿಮೋಚನ ಚಳುವಳಿಯ  ಜಿಲ್ಲಾಧ್ಯಕ್ಷ ಅಧ್ಯಕ್ಷ  H ರಾಘವವೇಂದ್ರ ಮಾತನಾಡಿ ಇಂದಿನ ವಿಶೇಷ ದಿನವನ್ನು  ಅರ್ಥಪೂರ್ಣವಾಗಿ ಶಿವಕುಮಾರ್ ಮತ್ತು ಕುಟುಂಬದವರಿಗೆ  ಶುಭವಾಗಲಿ ಇಂತಹ ಕಾರ್ಯಕ್ರಮಗಳ ಮೂಲಕ ನಿರಾಶ್ರಿತ ಕಡುಬಡವರ  ಕಷ್ಟಗಳಲ್ಲಿ ನಾವು ಸ್ವಲ್ಪ ಮಟ್ಟಿಗೆ ಭಾಗಿಯಾಗುವ ಮೂಲಕ ಸ್ಪಂದಿಸಿದ್ದೇವೆ ಎಂಬುದೇ ಒಂದು ರೀತಿಯ ಸಂತಸದ ವಿಷಯ,

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಗರ ಪ್ರದೇಶದಲ್ಲಿ ಇಂದಿಗೂ ಇಂತಹ ಕಡು ಬಡವರು ಇದ್ದಾರೆ ಎಂಬುದೇ ದುಃಖದ ಸಂಗತಿ, ಸರ್ಕಾರದ ಯೋಜನೆಗಳು  ಸೂಕ್ತ ರೀತಿಯಲ್ಲಿ ದೊರೆಯಲಿ, ದಾನಿಗಳು ತಮ್ಮ ವಿಶೇಷ ದಿನಗಳನ್ನು  ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ  ಆಚರಿಸಲಿ ಎಂಬುದೇ ನನ್ನ ಆಶಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  ಈ ಸಂದರ್ಭದಲ್ಲಿ  ಮುಖಂಡರಾದ  ಅಶೋಕ್, ವಿಜಯ್, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ್, ಉದಯ್ ಕುಮಾರ್, ಅನ್ನ ದಾಸೋಹಿ ಮಲ್ಲೇಶ್, ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!