ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೈತರು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಜೈವಿಕ ಹಾಗೂ ಸಸ್ಯ ಜನ್ಯಕೀಟ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಮೆಣಸಿ
ನಕಾಯಿ ಉತ್ಪಾದನೆಗೆ ಮುಂದಾಗ ಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಎಸ್.ಸುಪ್ರಿಯಾ ತಿಳಿಸಿದ್ದಾರೆ.
ತಾಲೂಕಿನ ವಡ್ಡರಹಳ್ಳಿ ಗ್ರಾಮದ ರೈತ ಶ್ರೀನಿವಾಸ ರೆಡ್ಡಿ ಅವರ ತಾಕಿನಲ್ಲಿ ಹಾಡೋ ನಹಳ್ಳಿ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಮೆಣಸಿನ ಕಾಯಿ ಬೆಳೆಯಲ್ಲಿ ಕಪ್ಪು ಡ್ರಿಪ್ಸ್ ಕೀಟದ ಪರಿಸರ ಸ್ನೇಹಿ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಮೆಣಸಿನ ಕಾಯಿ ಬೆಳೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಪ್ಪು ಡ್ರಿಪ್ಸ್ ಕೀಟದ ಬಾಧೆ ಹೆಚ್ಚಾಗುತ್ತಿದೆ. ಇದರಿಂದ ಶೇ.60ರಷ್ಟು ಇಳುವರಿ ನಷ್ಟ ಉಂಟಾಗುವ ಸಾಧ್ಯತೆಯಿದೆ.
ಈ ಕೀಟದ ನಿಯಂತ್ರಣಕ್ಕಾಗಿ ರೈತರು ಪದೇ ಪದೇ ರಾಸಾಯನಿಕ ಕೀಟನಾಶಕ ಸಿಂಪಡಿ ಸುವುದರಿಂದ ಕೀಟಗಳಲ್ಲಿ ಕೀಟನಾಶಕಗಳಿಗೆ ಪ್ರತಿ ರೋಧಕ ಶಕ್ತಿ ಬೆಳೆಯುವ ಸಾಧ್ಯತೆಯಿದೆ. ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತಿದೆ. ಈಹಿನ್ನೆಲೆಯಲ್ಲಿ ರೈತರಿಗೆ ಪರಿಸರ ಸ್ನೇಹಿ, ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ನಿರ್ವಹಣಾ ಕ್ರಮಗಳನ್ನು ಪರಿಚಯಿಸುವ ಉದ್ದೇಶದಿಂದ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಡ್ರಿಪ್ಸ್ ಕೀಟದ ಸಮಗ್ರ ನಿರ್ವಹಣೆ: ಪ್ರಾತ್ಯಕ್ಷಿಕೆಯಲ್ಲಿ ಕಪ್ಪು ಡ್ರಿಪ್ಸ್ ಕೀಟದ ಸಮಗ್ರ ನಿರ್ವಹಣೆಗಾಗಿ ಪ್ರತಿ ಹೆಕ್ಟೇರ್‌ಗೆ 2.5 ಟನ್ ಪುಷ್ಟಿಕರಿಸಿದ ಕೊಟ್ಟಿಗೆ ಗೊಬ್ಬರ ಹಾಗೂ 500 ಕೆ.ಜಿ.ಬೇವಿನ ಹಿಂಡಿಯನ್ನು ಬಳಸಿ, ಪ್ರತಿ100 ಕೆ.ಜಿ.ಕೊಟ್ಟಿಗೆ ಗೊಬ್ಬರಕ್ಕೆ 2 ಕೆ.ಜಿ. ಮೆಟಾರ್ಜಿ ಯುಮಾನಿ ಸೋಫಿಯಾ ಜೈವಿಕ ಶಿಲೀಂಧ್ರವನ್ನು ಸೇರಿಸಿ ಮಣ್ಣಿಗೆ ಕೂಡುವುದರ ಮೂಲಕ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರತಿ ಹೆಕ್ಟೇರ್‌ಗೆ 50 ಬಿಳಿ ಮತ್ತು ನೀಲಿ ಬಣ್ಣದ ಅಂಟು ಬಲೆಗಳನ್ನು ಅಳವಡಿಸಲಾಯಿತು.ಜೊತೆಗೆ ಬೇವಿನ ಎಣ್ಣೆ ಮತ್ತು ಹೊಂಗೆ ಎಣ್ಣೆಯನ್ನು ಪ್ರತಿ ಲೀಟರ್ ನೀರಿಗೆ 3 ಮಿ.ಲೀ. ಪ್ರಮಾಣದಲ್ಲಿ ಸಿಂಪಡಿಸು ವುದರೊಂದಿಗೆ, ಬ್ಯೂವೇರಿಯಾ ಬಸ್ಸಿಯಾನಾಮತ್ತು ಲೆಕಾನಿಸಿಲಿಯಮ್ ಲೆಕಾನಿ ಜೈವಿಕ ಶಿಲೀಂಧ್ರಗಳನ್ನು ಪ್ರತಿ ಲೀಟರ್‌ರಿಗೆ 5 ಮಿ.ಲೀ. ಪ್ರಮಾಣದಲ್ಲಿ 7 ದಿನಗಳ ಅಂತರದಲ್ಲಿ ಸಿಂಪಡಿಸುವ ತಾಂತ್ರಿಕತೆ ಯನ್ನು ರೈತರ ಹೊಲದಲ್ಲಿ ಅಳವಡಿಸ ಲಾಯಿತು.
ರೈತರು ಸಾಮಾನ್ಯವಾಗಿ ಅನುಸರಿಸುವ ರಾಸಾಯನಿಕ ಕೀಟನಾಶಕ ಆಧಾರಿತ ನಿರ್ವಹಣಾ ಕ್ರಮಗಳಿಗೆ ಹೋಲಿಸಿದಾಗ, ಈ ಪರಿಸರ ಸ್ನೇಹಿ ಸಮಗ್ರ ನಿರ್ವಹಣಾ ತಂತ್ರಜ್ಞಾನವು ರೈತರ ಹೊಲದಲ್ಲಿ ಉತ್ತಮ ಫಲಿತಾಂಶ ನೀಡಿದ್ದು, ಕಪ್ಪು ಸ್ಕ್ರಿಪ್ಸ್ ಕೀಟದ ಬಾಧೆಯನ್ನುಕಡಿಮೆ ಮಾಡುವುದರ ಜೊತೆಗೆ ಬೆಳೆ ಆರೋಗ್ಯ ಕಾಪಾಡಲು ಹಾಗೂ ಗುಣಮಟ್ಟದ ಮೆಣಸಿನಕಾಯಿ ಉತ್ಪಾದನೆಗೆ ಸಹಕಾರಿಯಾಗಿದೆ.
ಅಲ್ಲದೆ, ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ರೈತರು ರಾಸಾಯನಿಕ ಕೀಟನಾಶಕಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಜೈವಿಕ ಹಾಗೂ ಸಸ್ಯಜನ್ಯಕೀಟ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಮೆಣಸಿನಕಾಯಿ ಉತ್ಪಾದನೆಗೆ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು ರೈತರು ಹಾಜರಿದ್ದರು.




