ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಆರನೇ ಘಟಿಕೋತ್ಸವದಲ್ಲಿ ಲಾವಣ್ಯ ಪದವಿ ಕಾಲೇಜು ವಿದ್ಯಾರ್ಥಿ "ಕೃತಿಕ್ ಓ" 2025-26ನೇ ಸಾಲಿನ ಬಿ ಎ ಪದವಿಯ ಅಂತಿಮ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ಟಿಎಪಿಎಂಸಿಎಸ್ ನಿರ್ದೇಶಕ ವಿಶ್ವಾಸ್ ಹನುಮಂತೇಗೌಡ, ಪ್ರಾಂಶುಪಾಲರಾದ ಎಂ ಸಿ ಮಂಜುನಾಥ್, ಇತಿಹಾಸ ಉಪನ್ಯಾಸಕ ಮಹಾದೇವ್, ಅರ್ಥಶಾಸ್ತ್ರದ ಉಪನ್ಯಾಸಕ ಗುರುಪ್ರಸಾದ್, ಸೇರಿದಂತೆ ಬೋದಕ ಬೋದಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಲಾಯಿತು.



